
ಮೂಡುಬಿದಿರೆ: ಪ್ರೇರಣಾ ಶಾಲೆಯಲ್ಲಿ ಆಟಿ-ಕೂಟ ಆಚರಣೆ
Tuesday, August 5, 2025
ಮೂಡುಬಿದಿರೆ: ಶತಮಾನೋತ್ಸವದ ಹೊಸ್ತಿಲಲ್ಲಿರುವ ಕಡಲಕೆರೆ ಬಳಿಯ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿ-ಕೂಟ ಕಾರ್ಯಕ್ರಮ ಆಯೋಜಿಸಲಾಯಿತು.
ನಿರೂಪಕ ನಿತೇಶ್ ರೈ ಕಾರ್ಯಕ್ರಮ ಉದ್ಘಾಟಿಸಿ, ಆಟಿ ತಿಂಗಳು ತುಳುವರ ಪ್ರಮುಖ ಆಚರಣೆಗಳಲ್ಲಿ ಮಹತ್ವ ಪಡೆದ ತಿಂಗಳು. ಭಾರಿ ಮಳೆಯಿಂದಾಗಿ ಉಂಟಾಗುವ ಪ್ರಾಕೃತಿಕ ಬದಲಾವಣೆ, ಅದು ನಮ್ಮ ಆರೋಗ್ಯದಲ್ಲೂ ಏರುಪೇರು ಮಾಡಬಹುದು. ಅದನ್ನು ತಡೆಗಟ್ಟಲು ಪ್ರಕೃತಿಯಿಂದಲೇ ಚಿಕಿತ್ಸೆ ಗುಣವಿರುವ ಆಹಾರವನ್ನು ಅನುಸರಿಸಿದ್ದಾರೆ ಎಂದರು.
ಶಾಲಾ ಸಂಚಾಲಕರಾದ ಎಂ. ಶಾಂತಾರಾಮ ಕುಡ್ವ, ಸೇವಾಂಜಲಿ ಎಜುಕೇಶನಲ್ ಟ್ರಸ್ಟಿನ ಅಧ್ಯಕ್ಷ ರಾಜೇಶ್ ಬಂಗೇರ, ಮುಖ್ಯ ಶಿಕ್ಷಕ ವತ್ಸಲಾ ರಾಜೇಶ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ದೀಪಾಂಶ್ ಆಚಾರ್ಯ ಸ್ವಾಗತಿಸಿದರು. ವೈಷ್ಣವಿ ಎಸ್. ಬಂಗೇರ ನಿರೂಪಿಸಿದರು. ಧೃತಿ ವಂದಿಸಿದರು.