
ಗಂಟಾಲ್ಕಟ್ಟೆ: ಮಳೆಗಾಲದ ತಿಂಡಿ ತಿನಿಸುಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ
ಕಥೋಲಿಕ್ ಸಭಾ ಮೂಡುಬಿದಿರೆ ವಲಯಾಧ್ಯಕ್ಷ ಅಶ್ವಿನ್ ರೋಡ್ರಿಗಸ್ ಆಲಂಗಾರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಗಂಟಾಲ್ಕಟ್ಟೆ ಚರ್ಚಿನ ಧಮ೯ಗುರು ಪ್ರಕಾಶ್ ಡಿಸೋಜ ಹಲಸಿನ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಎಲ್ಲರೂ ಜೊತೆಗೂಡಿ ಉಣ್ಣುವುದು ಪ್ರೀತಿಯ ಸಂಕೇತವಾಗಿದ್ದು ಇಂತಹ ಕಾರ್ಯಕ್ರಮಗಳ ಆಯೋಜನೆ ಯಿಂದ ಸಂಬಂಧಗಳು ಬೆಳೆಯುತ್ತದೆ ಎಂದರಲ್ಲದೆ ನಮ್ಮ ಹಿರಿಯರು ಯಾವ ಕಾಲಕ್ಕೆ ಯಾವ ಆಹಾರದ ಅಗತ್ಯವಿದೆ ಎಂಬುದನ್ನು ಆರಿತು ವೈಜ್ಞಾನಿಕ ಕಲ್ಪನೆಗೂ ಮೀರಿದ ಔಷಧೀಯ ಸತ್ಯ ಇರುವ ಆಹಾರ ಪದಾರ್ಥಗಳ ಬಗ್ಗೆ ಶತಮಾನಗಳ ಹಿಂದೆಯೇ ಬೆಳಕು ಚೆಲ್ಲಿದ್ದು ಇಂತಹ ಸಾಂಪ್ರದಾಯಿಕ ಆಹಾರ ಸೇವನೆಯ ಮೂಲಕ ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.
ಆರೋಗ್ಯವನ್ನು ತಾವು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅಲಂಗಾರು ಚರ್ಚಿನ ಧರ್ಮಗುರು ರೆ. ಫಾ. ಮೆಲ್ವಿನ್ ನೊರೋನ್ಹಾ ಅವರು ಮಾತನಾಡಿ ವರ್ಷದ ಮೂರೂ ಕಾಲಗಳಿಗೆ ಅನ್ವಯಿಸುವ ಜೀವಸತ್ವ ನೀಡುವ ಆಹಾರ ಪದ್ಧತಿಯನ್ನು ನಮಗೆ ಪ್ರಕೃತಿ ಒದಗಿಸಿದೆ. ಹಿಂದೆ ನಮ್ಮ ಹಿರಿಯರಿಗೆ ಭತ್ತದ ಬೇಸಾಯ ಬಿಟ್ಟು ಬೇರೆ ಆದಾಯವಿರಲಿಲ್ಲ. ತಾವು ಗೇಯ್ಕೆ ಮಾಡುವ ಜಾಗದ ಮಾಲೀಕರಿಗೆ ಗೇಣಿ ಸಂದಾಯ ಮಾಡಿ ಸಂಸಾರ ಪೋಷಿಸುತ್ತಿದ್ದ ಅವರು ಇದನ್ನೆಲ್ಲಾ ಮಳೆಗಾಲದ ಆಹಾರವಾಗಿ ಬಳಸದೆ ಹಸಿವು ನೀಗಿಸುವ ಆಹಾರವಾಗಿ ಉಪಯೋಗಿಸುತ್ತಿದ್ದರು ಎಂದರು.
ಮೂಡುಬಿದಿರೆ ವಲಯದ ನೆಲ್ಲಿಕಾರು ಚರ್ಚಿನ ನೂತನ ಧರ್ಮಗುರುಗಳಾಗಿ ನೇಮಕ ಗೊಂಡಿರುವ ರೆ.ಫಾ, ಪೀಟರ್ ಆರಾನ್ಹಾ ಅವರಿಗೆ ಶಾಲು, ಹಾರ, ಫಲಪುಷ್ಪ, ಸ್ಮರಣಿಕೆ ನೀಡಿ ಆತ್ಮೀಯವಾಗಿ ವಲಯಕ್ಕೆ ಸ್ವಾಗತಿಸಲಾಯಿತು. ನೂತನವಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ
ಮೂಡುಬಿದಿರೆ ವಲಯದ ವಿವಿಧ ರಾಜಕೀಯ ಮತ್ತು ಸಹಕಾರಿ ವಲಯದ ಶೈಸ್ತ ಸಮುದಾಯದ ನಾಯಕರನ್ನು ಸನ್ಮಾನಿಸಲಾಯಿತು. ಅತಿಥಿಗಳಿಗೆ ವೀಳ್ಯ ನೀಡುವ ಮೂಲಕ ಸ್ವಾಗತಿಸಲಾಯಿತು. ಕಥೋಲಿಕ್ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಮೂಡುಬಿದಿರೆ ವಲಯದ ನಿಕಟಪೂರ್ವ ಅಧ್ಯಕ್ಷ ಅವಿಲ್ ಡಿಸೋಜ ಪಾಲಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಲಯಾಧ್ಯಕ್ಷ ಅಲ್ವಿಸ್ ರೋಡ್ರಿಗಸ್ ಸ್ವಾಗತಿಸಿದರು. ಕಾರ್ಯದರ್ಶಿ ರೋಶನ್ ಮಿರಾಂದಾ ವಂದಿಸಿದರು. ಅಶ್ವಿನ್ ಮಿನೇಜಸ್ ಕಾರ್ಯಕ್ರಮ ನಿರೂಪಿಸದರು.