ಆಮಂತ್ರಣ ವೇದಿಕೆಯ ಜಿಲ್ಲಾ ಅಧ್ಯಕ್ಷೆಯಾಗಿ ವಿಂಧ್ಯಾ ಎಸ್.ರೈ-ಉಪಾಧ್ಯಕ್ಷೆಯಾಗಿ ಅನಿತಾ ಶೆಟ್ಟಿ ಮೂಡುಬಿದಿರೆ ಆಯ್ಕೆ

ಆಮಂತ್ರಣ ವೇದಿಕೆಯ ಜಿಲ್ಲಾ ಅಧ್ಯಕ್ಷೆಯಾಗಿ ವಿಂಧ್ಯಾ ಎಸ್.ರೈ-ಉಪಾಧ್ಯಕ್ಷೆಯಾಗಿ ಅನಿತಾ ಶೆಟ್ಟಿ ಮೂಡುಬಿದಿರೆ ಆಯ್ಕೆ


ಮೂಡುಬಿದಿರೆ: ಮಂಗಳೂರು ಜಿಲ್ಲೆ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ನೂತನ ಜಿಲ್ಲಾ ಅಧ್ಯಕ್ಷೆಯಾಗಿ ಸಾಹಿತಿ ವಿಂಧ್ಯಾ ಎಸ್. ರೈ ಕಡೇಶಿವಾಲಯ ಮತ್ತು  ಉಪಾಧ್ಯಕ್ಷೆಯಾಗಿ ಸಾಹಿತಿ ಅನಿತಾ ಶೆಟ್ಟಿ ಮೂಡುಬಿದಿರೆ ಆಯ್ಕೆಯಾಗಿದ್ದಾರೆ.

ಮೂಡುಬಿದಿರೆ ಸಮಾಜ ಮಂದಿರದಲ್ಲಿ  ನಡೆದ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಮಾತನಾಡಿ, ಒಂದು ವರ್ಷದ ಕಾಯ೯ಕ್ರಮದ ಪ್ರಗತಿಗೆ ಪರಿವಾರದ  ಪದಾಧಿಕಾರಿಗಳ ಸರ್ವ ರೀತಿಯ ಸಹಕಾರವೇ ಕಾರಣ ಎಂದರು. 

ಜಿಲ್ಲಾಧ್ಯಕ್ಷೆ ನಿರೀಕ್ಷಿತಾ ಮಂಗಳೂರು ಮುಂದಿನ ಬದಲಾವಣೆ ಕುರಿತು ಒಪ್ಪಿಗೆ ಸೂಚಿಸಿ ಈವರೆಗೆ ಎಲ್ಲರೂ ತಮ್ಮ ಮನೆಯವರಂತೆ ಪ್ರೀತಿಯ ಸಹಕಾರವನ್ನು ಸ್ಮರಿಸಿ ಮುಂದೆಯೂ ಉತ್ತಮ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಆಯ್ಕೆ ಸಭೆಯಲ್ಲಿ ರಾಜ್ಯ ಪ್ರತಿನಿಧಿಗಳಾದ ಹೆಚ್ಕೆ ನಯನಾಡು, ಆಶಾ ಅಡೂರು, ಭಾರತಿ ಪರ್ಕಳ, ಜಿಲ್ಲಾ ನಿರ್ದೇಶಕರಾದ ಚೇತನ್ ಕುಮಾರ್ ಅಮೈ, ಬೆಳ್ತಂಗಡಿ ತಾಲೂಕು ಅಧ್ಯಕ್ಷೆ ವಿದ್ಯಾಶ್ರೀ ಅಡೂರು, ಬಂಟ್ವಾಳ ತಾಲೂಕು ಅಧ್ಯಕ್ಷೆ ರಶ್ಮಿತಾ ಸುರೇಶ್ ಜೋಗಿಬೆಟ್ಟು, ಮೂಡುಬಿದಿರೆ ತಾಲೂಕು ಅಧ್ಯಕ್ಷೆ ಕವಿತಾ ದಿನೇಶ್ ಕಟೀಲ್, ಕಾರ್ಯದರ್ಶಿ ಸುಶ್ಮಿತಾ ಆರ್, ಲೋಲಾಕ್ಷಿ ಶೆಟ್ಟಿ, ಪ್ರಕಾಶ್ ಆಚಾರ್ಯ, ಬಂಟ್ವಾಳ ಘಟಕದ ರೂಪೇಶ್ ಕುಮಾರ್, ರಾಕೇಶ್ ಪೊಳಲಿ, ಪ್ರಸಾದ್ ನಾಯಕ್ ಕಾರ್ಕಳ, ವಿಜಯಚಂದ್ರ ಮುಂಡ್ಲಿ, ಅನ್ನಪೂರ್ಣ ಶ್ಯಾನುಭೋಗ್ ಅಂಬಲಪಾಡಿ, ಅಕ್ಷತಾ ಅಡೂರು, ಸರೀನ್ ತಾಜ್ ಕಾಶಿಪಟ್ಣ, ದೀಕ್ಷಾ ಕಾಶಿಪಟ್ಣ ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article