ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ತಾಕೊಡೆ ಲ್ಯಾನ್ಸಿ ಮೆಂದಾರಿಗೆ ಸನ್ಮಾನ

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ತಾಕೊಡೆ ಲ್ಯಾನ್ಸಿ ಮೆಂದಾರಿಗೆ ಸನ್ಮಾನ


ಮೂಡುಬಿದಿರೆ: ಸಂಪಿಗೆ ನಿವಾಸಿ ತಾಕೊಡೆ ಲ್ಯಾನ್ಸಿ ಮೆಂದಾ ಅವರನ್ನು ನಿವೃತ್ತ ಸರಕಾರಿ ನೌಕರರ ಸಂಘದ ವತಿಯಿಂದ ಶನಿವಾರ ಸಮಾಜ ಮಂದಿರದಲ್ಲಿ ಸನ್ಮಾನಿಸಲಾಯಿತು.

ನಂತರ ಮಾತನಾಡಿದ ಮೆಂದಾ ಅವರು 1992ರಲ್ಲಿ ಸೇನೆಗೆ ಸೇರಿ ವಿವಿಧೆಡೆ ಕಾರ್ಯ ನಿರ್ವಹಿಸಿ, ಕಾರ್ಗಿಲ್ ಯುದ್ಧದಲ್ಲಿ ಗಾಯಗೊಂಡಿದ್ದನ್ನು ಸ್ಮರಿಸಿಕೊಂಡರು. 

ಸಂಘದ ಅಧ್ಯಕ್ಷ ತುಕಾರಾಂ ಕೆಂಬಾರೆ ಅಧ್ಯಕ್ಷತೆ ವಹಿಸಿದ್ದರು. 

ಅಂಡಾರು ಗುಣಪಾಲ ಹೆಗ್ಡೆ ಅವರು ಮಾತನಾಡಿ, 2026ರ ಏಪ್ರಿಲ್ 1ಕ್ಕೆ ಮೊದಲು ನಿವೃತ್ತ ಸರಕಾರಿ ನೌಕರರ ಪಿಂಚಣಿ ಹಾಗೂ ಕುಟುಂಬ ಪಿಂಚಣಿ ಪರಿಷ್ಕರಿಸಲು ಸಾಧ್ಯವಿಲ್ಲ ಎಂದು ಕೈಗೊಂಡ 8 ನೇ ಹಣಕಾಸು ಆಯೋಗದ ನಿರ್ಣಯ ಖಂಡಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಯವರಿಗೆ ಮನವಿಯನ್ನು ಕಳುಹಿಸಲಾಯಿತು.

ರಾಷ್ಟ್ರ ಪ್ರಶಸ್ತಿ ವಿಜೇತ ಉತ್ತಮ ಶಿಕ್ಷಕ ಬೇಲಾಡಿ ವಿಠಲಶೆಟ್ಟಿ ಉಪಸ್ಥಿತರಿದ್ದರು.

ಪ್ರೇಮಲತಾ ಸ್ವಾಗತಿಸಿದರು. ಕಾರ್ಯದರ್ಶಿ ಎಲ್.ಜೆ ಫೆರ್ನಾಂಡಿಸ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article