ಮೂಡುಬಿದಿರೆ ಗಣೇಶೋತ್ಸವ ಶೋಭಾಯಾತ್ರೆ: ಸ್ವಚ್ಛತೆಗೆ ಆದ್ಯತೆ ನೀಡುವಂತೆ ಪುರಸಭೆಯಿಂದ ವ್ಯಾಪಾರಸ್ಥರಲ್ಲಿ ಮನವಿ
Sunday, August 31, 2025
ಮೂಡುಬಿದಿರೆ: ಇಲ್ಲಿನ ಪುರಸಭೆಯು ಸ್ವಚ್ಛತೆಗೆ ವಿಶೇಷ ಪ್ರಾತಿನಿಧ್ಯ ನೀಡುತ್ತಿದೆ. ಸಮಾಜ ಮಂದಿರದಲ್ಲಿ ಪೂಜಿಸಲ್ಪಟ್ಟ 62ನೇ ವಷ೯ದ ಗಣೇಶನ ವಿಸಜ೯ನಾ ಶೋಭಾಯಾತ್ರೆಯು ಇಂದು ಸಂಜೆ ನಡೆಯಲಿದ್ದು ಈ ಸಂದರ್ಭದಲ್ಲಿ ಪೇಟೆಯಲ್ಲಿ ಸ್ಟಾಲ್ ಹಾಕಿರುವ ವ್ಯಾಪಾರಸ್ಥರು ಸ್ವಚ್ಛತೆಯನ್ನು ಕಾಪಾಡುವ ಮೂಲಕ ಪುರಸಭೆಯ ಜತೆ ಸಹಕರಿಸುವಂತೆ ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ ಮತ್ತು ಉಪಾಧ್ಯಕ್ಷರಾದ ನಾಗರಾಜ್ ಪೂಜಾರಿ ಅವರು ವ್ಯಾಪಾರಸ್ಥರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಮ್ಯೂನಿಟಿ ಮೊಬಿ ಲೈಸೆರ್ ಗಳಾದ ಅಮಿತಾ, ಆಶಾ, ಚಂದ್ರಿಕಾ, ಅನುಷಾ ಮತ್ತಿತರರಿದ್ದರು.

