ಯಕ್ಷಗಾನೀಯ ಶೈಲಿಯಲ್ಲಿ ಮೊಸರ ಮಡಿಕೆಗಳನ್ನು  ಒಡೆದ ಮೂಡುಬಿದಿರೆಯ ಕೃಷ್ಣ

ಯಕ್ಷಗಾನೀಯ ಶೈಲಿಯಲ್ಲಿ ಮೊಸರ ಮಡಿಕೆಗಳನ್ನು ಒಡೆದ ಮೂಡುಬಿದಿರೆಯ ಕೃಷ್ಣ


ಮೂಡುಬಿದಿರೆ: ಇಲ್ಲಿನ ಶ್ರೀ ಗೋಪಾಲಕೃಷ್ಣ ದೇವಳದ 109ನೇ ವರ್ಷದ ಮೊಸರು ಕುಡಿಕೆ ಉತ್ಸವದಂಗವಾಗಿ ಯಕ್ಷಗಾನೀಯ ಶ್ರೀಕೃಷ್ಣ ವೇಷದಾರಿ ಚೆಂಡೆ, ಮದ್ದಳೆ ಜಾಗಟೆಗಳ ಹಿಮ್ಮೇಳಕ್ಕೆ ಕುಣಿಯುತ್ತಾ ದಾರಿಯುದ್ದಕ್ಕೂ ಕಟ್ಟಿರುವ ಮೊಸರು ತುಂಬಿರುವ ಮಡಿಕೆಗಳನ್ನು ಒಂದೊಂದಾಗಿ ಒಡೆಯುತ್ತಾ ಸಾಗುವ ದೃಶ್ಯ ಗಮನ ಸೆಳೆಯಿತು.

ಶನಿವಾರ ಮೊದಲಿಗೆ ಗೋಪಾಲಕೃಷ್ಣ ದೇವಳದಲ್ಲಿ ಪೂಜೆ ಬಳಿಕ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಸ್ಥಾಪಿಸಿ, ಮೆರವಣಿಗೆಯಲ್ಲಿ ಹೊರಡಿತು. 


ಮೂಡುಬಿದಿರೆ ಪೇಟೆಯ ಪ್ರಾರಂಭದಿಂದ ಜೈನ್ ಪೇಟೆ ತನಕ ಮುಖ್ಯ ರಸ್ತೆಯ ಎರಡೂ ಬದಿಯ ಕಟ್ಟಡಗಳ ಗ್ಯಾಲರಿಗಳಿಗೆ ಅಥವಾ ಎರಡು ಕಂಬಗಳಿಗೆ ಎಳೆದ ಹಗ್ಗದಿಂದ ಅನೇಕ ರೀತಿಯ ದ್ರವ್ಯ ಹಾಗೂ ತಿನಿಸುಗಳನ್ನು ಒಳಗೊಂಡ ಮಡಿಕೆಗಳನ್ನು ಒಡೆಯಲಾಯಿತು.  

ದೇವಳದ ಮೊಕ್ತೇಸರ ಗುರುಪ್ರಸಾದ್ ಹೊಳ್ಳ ಸಹಿತ ಗಣ್ಯರು ಪಾಲ್ಗೊಂಡರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article