ಭಾರತೀಯ ಸೇನೆಯಲ್ಲಿ ವಿಪುಲ ಅವಕಾಶ ನಿವೃತ್ತ ಯೋಧ ಕಾರ್ಗಿಲ್ ವೀರ ನಾಯಕ್ ಲೀಲಾದರ್ ಕಡಂಬೋಡಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಎಲ್ಲರಿಗೂ ಭಗವಂತ ಪ್ರತಿಭೆಯನ್ನು ಕೊಟ್ಟಿದ್ದಾನೆ ಅದನ್ನು ಬಳಸಿಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕು, ನಾವೆಲ್ಲರೂ ಸುಖ ಶಾಂತಿ ನೆಮ್ಮದಿಯಿಂದ ಇರಲು ಭಾರತೀಯ ಸೇನೆ ಕಾರಣ. ಸೇನೆಗೆ ಸೇರಲು ದೈಹಿಕ ಸಾಮರ್ಥ್ಯ ಬಹುಮುಖ್ಯ. ದೇಶ ಸೇವೆಗೆ ಎಲ್ಲರೂ ಸೇರಬೇಕು. ದೇಶ ಕಾಯುವ ಸೈನಿಕರ ಬಗ್ಗೆ ನಮಗೆ ಗೌರವ ಇರಬೇಕು, ಎಲ್ಲರಲ್ಲೂ ದೇಶ ಪ್ರೇಮವನ್ನು ಹುಟ್ಟಿಸಬೇಕು, ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧ ನಾಯಕ್ ಲೀಲಾಧರ ಕಡಂಬೋಡಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ದೇಶದ ವೀರಯೋಧರ ಸೇವೆಯನ್ನು ಅವರ ತ್ಯಾಗ ಬಲಿದಾನವನ್ನು ನೃತ್ಯದ ಮೂಲಕ ಬಿಂಬಿಸಲಾಯಿತು. ಭಾರತೀಯ ಧೀರ ಯೋಧ ಮೇಜರ್ ಆಶಾರಾಮ್ ತ್ಯಾಗಿ ಅವರ ಹೋರಾಟದ ದೃಶ್ಯ ರೂಪಕವನ್ನು ಅಭಿನಯಿಸಲಾಯಿತು.
ಇದೇ ಕಾರ್ಯಕ್ರಮದಲ್ಲಿ ಸಂಸ್ಥೆಯ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಶಿಸ್ತು, ಜವಬ್ದಾರಿ ಹಾಗೂ ರಾಷ್ಟ್ರ ಭಕ್ತಿ ನೈತಿಕತೆಯ ಮೌಲ್ಯ ಸಾರುವ ಎನ್‌ಸಿಸಿ ಬ್ಯಾರೆಟ್‌ಗಳನ್ನು ನೀಡಲಾಯಿತು. ಶಿಸ್ತು, ಶಾರೀರಿಕ ಕ್ಷಮತೆ ಹಾಗೂ ರಾಷ್ಟçಭಕ್ತಿಯ ಅಭಿವ್ಯಕ್ತಿಗಾಗಿ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.
ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಸಂಪತ್‌ಕುಮಾರ್ ಜೈನ್, ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಉಪ ಮುಖ್ಯೋಪಾಧ್ಯಾಯರಾದ ಜಯಶೀಲ ಉಪಸ್ಥಿತರಿದ್ದರು. ಧಕ್ಷ ಸ್ವಾಗತಿಸಿ, ಕಾರ್ಯಕ್ರಮವನ್ನು ಶಾಶ್ವತ್ ಮತ್ತು ಆರ್ಯನ್ ಶಿಂಧೆ ನಿರೂಪಿಸಿದರು.ಚಾರ್ವಿ ವಂದಿಸಿದರು.
