
ಮೂಡುಬಿದಿರೆ ಜೈನಮಠದಲ್ಲಿ ತುಳು ಕಾವ್ಯ ಯಾನ
Monday, August 25, 2025
ಮೂಡುಬಿದಿರೆ: ನಮ್ಮ ತುಳು ಪರಂಪರೆ ಸೊಗಡನ್ನು ಈ ನಾಡಿಗೆ ನೀಡಿರುವ ಮಂದಾರ ಕೇಶವ ಭಟ್ಟರು ಕಾವ್ಯದ ಮುಖಾಂತರ ಜೀವಂತವಾಗಿದ್ದಾರೆ. ಕಾವ್ಯ ಯಾನದ ಮೂಲಕ ಅವರ ಕಾವ್ಯವು, ಸಂಗೀತದೊಡನೆ ಸೇರಿ ಕಲಾ ರಸಿಕರಿಗೆ ವಿಶೇಷ ಅನುಭೂತಿ ನೀಡುತ್ತದೆ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ನುಡಿದರು.
ಮೂಡುಬಿದಿರೆ ಜೈನಮಠದಲ್ಲಿ ತುಳುವ ಮಹಾಸಭೆ ಮೂಡುಬಿದಿರೆ, ಧವಳತ್ರಯ ಜೈನ ಕಾಶಿ ಟ್ರಸ್ಟ್ ಮೂಡುಬಿದಿರೆ, ಮಂದಾರ ಪ್ರತಿಷ್ಠಾನ ಮಂಗಳೂರು, ತುಳು ಕೂಟ ಬೆದ್ರ ಸಹಯೋಗದಲ್ಲಿ ಭಾನುವಾರ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರು ಬರೆದ `ಬೀರದ ಬೊಲ್ಬು- ಶ್ರೀ ಕೃಷ್ಣನ ಬಾಲ ಲೀಲೆ ಕಾವ್ಯಯಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅರ್ಥಗಾರಿಕೆ, ಪ್ರಶಾಂತ ರೈ ಪುತ್ತೂರು ಹಾಗೂ ರಚನಾ ಚಿತ್ಕಲ್ ಗಾಯನ ಮತ್ತು ಎಂ. ದೇವಾನಂದ ಭಟ್ ಅವರ ಮದ್ದಳೆಯೊಂದಿಗೆ ಸತತ ಮೂರು ಗಂಟೆಗಳು ಕಾವ್ಯ ಯಾನ ಕಾರ್ಯಕ್ರಮ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಶಾರದಾಮಣಿ, ಸಂಗೀತ ನಿರ್ದೇಶಕ, ತುಳು ವಲ್ಡ್ನ ಮುಖ್ಯಸ್ಥ ಡಾ. ರಾಜೇಶ್ ಆಳ್ವ, ತುಳುವ ಮಹಾಸಭೆಯ ಕಾರ್ಯನಿರ್ವಹಣಾಧಿಕಾರಿ ಪ್ರಮೋದ್ ಸಪ್ರೆ, ಡಾ. ಮಂದಾರ ರಾಜೇಶ್ ಭಟ್, ಜಯಂತಿ ಬಂಗೇರ, ಚಂದ್ರಹಾಸ ದೇವಾಡಿಗ, ಪ್ರೊ. ಭಾಸ್ಕರ ರೈ.ಕುಕ್ಕುವಳ್ಳಿ, ಸುದೇಶ್ ಕುಮಾರ್ ಪಟ್ಣಶೆಟ್ಟಿ, ಮಂದಾರ ರಾಜೇಶ್ ಭಟ್ ಉಪಸ್ಥಿತರಿದ್ದರು