ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಂಭ್ರಮದ 79ನೇ ಸ್ವಾತಂತ್ರ್ಯ ದಿನಾಚರಣೆ

ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಂಭ್ರಮದ 79ನೇ ಸ್ವಾತಂತ್ರ್ಯ ದಿನಾಚರಣೆ


ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.


ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ. ಫಾ. ಅಶೋಕ್ ರಾಯನ್ ಕ್ರಾಸ್ತಾ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಮಗೆ  ಯೋಚಿಸಲು ಮತ್ತು ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ, ಈ ಸ್ವಾತಂತ್ರ್ಯದಿಂದಾಗಿ ಆರ್ಥಿಕತೆಯು ಬೆಳೆಯುತ್ತಿದೆ, ಮಾನವನ ಘನತೆಯು ಹೆಚ್ಚಿದೆ, ಮಹತ್ತರವಾದ ಅಭಿವೃದ್ಧಿಯಾಗುತ್ತಿದೆ. ಇದೆಲ್ಲವೂ ಸಾಧ್ಯವಾಗುತ್ತಿರುವುದು ನಮಗೆ ಸಿಕ್ಕಿರುವ ಸ್ವಾತಂತ್ರದಿಂದಾಗಿ ಮಾತ್ರ. ಭಾರತೀಯರಿಗೆ ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ಜವಾಬ್ದಾರಿ ಇದೆ.ಭ್ರಷ್ಟಾಚಾರ, ತಾರತಮ್ಯ, ಬಡತನ, ಅಜ್ಞಾನದಿಂದ ನಾವು ಸ್ವಾತಂತ್ರ್ಯ ಪಡೆಯಬೇಕು ಮತ್ತು ಅದಕ್ಕಿಂತ ಹೆಚ್ಚಾಗಿ ದ್ವೇಷದಿಂದ ಸ್ವಾತಂತ್ರ್ಯ ಪಡೆಯಬೇಕು. ಭಾರತ ಸಂಪೂರ್ಣ ಸ್ವತಂತ್ರ ದೇಶ ಎಂದು ಭಾವನಾತ್ಮಕವಾಗಿ ಹೇಳಬಹುದಾದರೂ, ಅದನ್ನು ನಿಜವಾಗಿಸಲು ನಾವೆಲ್ಲರೂ ಜವಾಬ್ದಾರರಾಗಿರೋಣ ಎಂದು ಹೇಳಿದರು.


ವಿಜ್ಞಾನ ವಿಭಾಗದ ಡೀನ್ ಡಾ. ಮಾಲಿನಿ ಕೆ. ಅವರು ಸ್ವಾತಂತ್ರ್ಯ ದಿನಾಚರಣೆಯ ಕುರಿತು ಸಂದೇಶವನ್ನು ನೀಡಿ, ಸ್ವಾತಂತ್ರ್ಯ ದಿನಾಚರಣೆ ಕೇವಲ ಒಂದು ಆಚರಣೆಯಲ್ಲ ಸ್ವಾತಂತ್ರ್ಯ ಎಂದರೆ ಕೇವಲ ವಿದೇಶಿ ಆಡಳಿತದ ಅನುಪಸ್ಥಿತಿಯಲ್ಲ, ಅದು ಎಲ್ಲರಿಗೂ ನ್ಯಾಯ, ಸಮಾನತೆ ಮತ್ತು ಅವಕಾಶದ ಉಪಸ್ಥಿತಿ. ಇದು ಬಡತನ, ಅನಕ್ಷರತೆ ಮತ್ತು ತಾರತಮ್ಯವನ್ನು ನಿರ್ಮೂಲನ ಮಾಡುವುದು, ನಮ್ಮ ಪರಿಸರವನ್ನು ರಕ್ಷಿಸುವುದು, ನಮ್ಮ ಪರಂಪರೆಯನ್ನು ಉಳಿಸುವುದು ಮತ್ತು ಬಲಿಷ್ಠ ಭಾರತವನ್ನು ನಿರ್ಮಿಸಲು ನಮ್ಮ ಪ್ರತಿಭೆಗಳನ್ನು ಬಳಸಿಕೊಳ್ಳುವುದಾಗಿದೆ ಎಂದರು.

ಸಂತ ಫಿಲೋಮಿನಾ ಪದವಿ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ವಂ. ಫಾ. ಡಾ. ಆಂಟೋನಿ ಪ್ರಕಾಶ್ ಮೊಂತೆರೊ ಮಾತನಾಡಿ, ಜೀವನದಲ್ಲಿ ನಾವು ಸ್ವಲ್ಪ ಗಂಭೀರವಾಗಿರಬೇಕು. ಧ್ವಜದಲ್ಲಿ ಮೂರು ಬಣ್ಣಗಳಿವೆ, ಕೇಸರಿ ತ್ಯಾಗದ ಸಂಕೇತ, ಬಿಳಿ ಶುದ್ಧತೆಯ ಸಂಕೇತ, ಹಸಿರು ಸಮೃದ್ಧಿಯ ಸಂಕೇತ. ತ್ಯಾಗ, ಶುದ್ಧತೆ, ಸಮೃದ್ಧಿ ಇದು ಮನುಷ್ಯನಲ್ಲಿ ಇದ್ದರೆ ಅವನು ಸಂಪೂರ್ಣ. ಜೀವನದಲ್ಲಿ ಸ್ವಾರ್ಥ, ಭ್ರಷ್ಟತೆ ಮತ್ತು ಸೋಮಾರಿತನವನ್ನು ಬಿಡಬೇಕು. ದೇಶಭಕ್ತಿ ಎಂಬುವುದು ಶ್ರಮ, ಶಿಸ್ತು ಮತ್ತು ಒಗ್ಗಟ್ಟಿನಿಂದ ಇರುವ ಜನರಿಂದ ಪ್ರದರ್ಶಿಸಲ್ಪಡಬೇಕು ಎಂದು ಹೇಳಿದರು.

ಎನ್‌ಸಿಸಿ ಆರ್ಮಿ ವಿಂಗ್ಸ್ ಮತ್ತು ನೌಕ ವಿಭಾಗದ ಕೆಡೆಟ್‌ಗಳು, ರೋವರ್ಸ್-ರೆಂಜರ್ಸ್, ಎನ್‌ಎಸ್‌ಎಸ್ ಸ್ವಯಂ ಸೇವಕರು, ಜೂನಿಯರ್ ಮತ್ತು ಯೂತ್ ರೆಡ್‌ಕ್ರಾಸ್ ಘಟಕ ಮತ್ತು ಬ್ಯಾಂಡ್ ಟ್ರೂಪ್ ಭಾಗವಹಿಸಿದರು. ಎಸ್‌ಜಿಟಿ ದಿಯಾ ಕೆ. ಪೆರೇಡ್ನ ನೇತೃತ್ವ ವಹಿಸಿದ್ದರು.

ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಸ್ವಾತಂತ್ರೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್ ಜಾನ್ಸನ್ ಡೇವಿಡ್ ಸಿಕ್ವೆರಾ, ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ಚಂದ್ರಶೇಖರ್ ಕೆ. ಮತ್ತು ಪುಷ್ಪಾ ಎನ್., ರೋವರ್ ಸ್ಕೌಟ್ ಲೀಡರಾದ ಚಂದ್ರಾಕ್ಷ, ಜೂನಿಯರ್ ಮತ್ತು ಯೂತ್ ರೆಡ್‌ಕ್ರಾಸ್ ಘಟಕದ ಸಂಚಾಲಕರಾದ ಜ್ಯೋತಿ ಎಂ., ರಾಜೇಶ್ ಮೂಲ್ಯ ಮತ್ತು ಡಾ. ಡಿಂಪಲ್ ಜೇನಿಫರ್ ಫೆರ್ನಾಂಡಿಸ್, ಲಲಿತ ಕಲಾ ಸಂಘದ ಸಂಚಾಲಕರಾದ ರಶ್ಮಿ ಪಿ.ಎಸ್. ಮತ್ತು ಪ್ರಶಾಂತ್ ರೈ, ಉಪ ಪ್ರಾಂಶುಪಾಲ ಡಾ. ವಿಜಯ್ ಕುಮಾರ್ ಎಂ., ಐಕ್ಯೂಎಸಿ ಸಂಯೋಜಕ ಡಾ. ಎಡ್ವಿನ್ ಎಸ್. ಡಿಸೋಜಾ, ಶೈಕ್ಷಣಿಕ ಕುಲಸಚಿವ ಡಾ. ನೋರ್ಬಟ್ ಮಸ್ಕರೇನ್ಹಸ್ ಮತ್ತು ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ, ಆಫೀಸ್ ಸುಪರಿಂಟೆಂಡೆಂಟ್ ರೂಫಿನಾ ಡಿಸೋಜಾ, ಪಿಆರ್‌ಓ ಭಾರತಿ ಎಸ್. ರೈ, ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ವೃಂದ ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಭೌತಶಾಸ್ತ್ರ ವಿಭಾಗದ ಪ್ರಾಧ್ಯಪಕ ಡಾ. ಚಂದ್ರಶೇಖರ್ ಕೆ. ವಂದಿಸಿ, ಪೂಜಾಶ್ರೀ ವಿ. ರೈ ಕಾರ್ಯಕ್ರಮವನ್ನು ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article