ಸಂತ ಫಿಲೋಮಿನಾ ಕಾಲೇಜಿನಲ್ಲಿ ಹ್ಯಾಕಥಾನ್ ಕಾರ್ಯಕ್ರಮ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಹ್ಯಾಕಥಾನ್ ಕಾರ್ಯಕ್ರಮ


ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕವಿಜ್ಞಾನ ವಿಭಾಗ, ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗ ಹಾಗೂ ಇನ್ಟಿಟ್ಯೂಶನ್ಸ್ ಇನೊವೇಶನ್ಕೌನ್ಸಿಲ್(ಐಐಸಿ)ಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಇನೊವೇಶನ್ ಸೆಂಟರ್‌ನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ ಹಾಗೂ ಕಂಪ್ಯೂಟರ್ ಸಯನ್ಸ್‌ನ ವಿದ್ಯಾರ್ಥಿಗಳಿಗಾಗಿ 8 ಗಂಟೆಗಳ ಹ್ಯಾಕಥಾನ್ ಕಾರ್ಯಕ್ರಮ ನಡೆಯಿತು.


ಹ್ಯಾಕಥಾನ್‌ನ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ವಹಿಸಿದ್ದರು. ದೀಪ ಬೆಳಗಿಸಿ ಉದ್ಘಾಟನೆಗೈದು ಮಾತನಾಡಿದ ಅವರು ‘ಸೃಜನಶೀಲತೆ ಎಂದರೆ ಹೊಸ ವಿಷಯಗಳನ್ನು ಕಲ್ಪಿಸಿಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರಲು ಮುತುವರ್ಜಿವಹಿಸುವುದು. ನಮ್ಮ ವಿದ್ಯಾರ್ಥಿಗಳು ಈ ರೀತಿಯ ಸೃಜನಶೀಲತೆಯನ್ನು ಅಭಿವೃದ್ಧಿಪಡಿಸಿಕೊಳ್ಳುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಂತಸದ ವಿಚಾರ. ತಂತ್ರಜ್ಞಾನವು ಜೀವನದ ಅವಿಭಾಜ್ಯ ಅಂಗವಾಗಿರುವ ಈ ಕಾಲಘಟ್ಟದಲ್ಲಿ ಅದರ ಸಮರ್ಪಕ ಬಳಕೆಯಿಂದಾಗಿ ನೀವುಗಳು ರೂಪಿಸಿದ ಒಂದೊಂದು ಕಲ್ಪನೆಯೂ ಮುಂದೆ ಸಮಾಜದಲ್ಲಿ ಧನಾತ್ಮಕ ಬದಲಾವಣೆಯನ್ನು ತರುವಲ್ಲಿ ಸಹಕಾರಿಯಾಗುವುದು. ನೀವು ಮಾಡುವ ಪ್ರತಿಯೊಂದು ಸಣ್ಣ ಪ್ರಯತ್ನವು ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಗ್ಯಾಜೆಟ್ ಹಾಗೂ ತಂತ್ರಜ್ಞಾನವನ್ನು ಬಳಸಿ ಸಮಾಜದಲ್ಲಿ ಗೊಂದಲಗಳನ್ನು ಸೃಷ್ಠಿಸದೆ ಅವುಗಳನ್ನು ರಚನಾತ್ಮಕ ಕಾರ್ಯಗಳಿಗೆ ಜವಾಬ್ದಾರಿಯುತವಾಗಿ ಬಳಸಿರಿ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿ ಸಂಘಟಕರನ್ನು ಅಭಿನಂದಿಸಿದರು.


ಎಂಸಿಎ ವಿದ್ಯಾರ್ಥಿನಿ ನಿರ್ಮಿತಾ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಗಣಕವಿಜ್ಞಾನ ವಿಭಾಗದ ಡೀನ್ ಹಾಗೂ ಮುಖ್ಯಸ್ಥ ಡಾ. ವಿನಯಚಂದ್ರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಂಸಿಎ ವಿದ್ಯಾರ್ಥಿನಿ ನಿರೀಕ್ಷಾ ವಂದಿಸಿ ಅಪೂರ್ವ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಇನೊವೇಶನ್ ಸೆಂಟರ್ನ ಡಿಸ್ಟ್ರಿಕ್ಟ್ ಇನ್ನೊವೇಟಿವ್ ಅಸೋಸಿಯೇಟ್ ಅಭಿಷೇಕ್ ಸುವರ್ಣ ಹಾಗೂ ಐಐಸಿ ಘಟಕದ ಸಂಯೋಜಕಿ ಡಾ. ಗೀತಾ ಪೂರ್ಣಿಮಾ ಕೆ. ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ತಲಾ ಮೂವರು ವಿದ್ಯಾರ್ಥಿಗಳಿದ್ದ 23 ತಂಡಗಳು ಭಾಗವಹಿಸಿದ್ದವು.  ಶಿಕ್ಷಣ, ಆರೋಗ್ಯ ಹಾಗೂ ಸುಸ್ಥಿರ ಪರಿಸರ ಎಂಬ ಮೂರು ವಿಭಾಗಗಳಿದ್ದು ವಿದ್ಯಾರ್ಥಿಗಳಿಗೆ ತಮಗಿಷ್ಟವಾದ ವಿಷಯಗಳ ಮೇಲೆ ಕ್ರಿಯಾತ್ಮಕ, ಸೃಜನಶೀಲ ಹಾಗೂ ಕಾರ್ಯಗತಗೊಳಿಸಬಹುದಾದ ಸಮಸ್ಯೆಗೆ ಪರಿಹಾರ ಸೂಚಿಸಲು ಅವಕಾಶವಿತ್ತು. ಬೆಳಗ್ಗೆ 8 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮವು ಸಾಯಂಕಾಲ 5.30 ಸಂಪನ್ನಗೊಂಡಿತು. 

ಕಂಪ್ಯೂಟ್ ಸಯನ್ಸ್ ವಿಭಾಗದ ಉಪನ್ಯಾಸಕರಾದ ವಾರಿಜಾ ಎಂ., ಅಕ್ಷತಾ ಬಿ, ಸುರಕ್ಷಾ ಎಸ್., ಚೈತ್ರ ಎನ್.ಪಿ., ನೀಲಮ್ ಕುಟ್ಟಪ್ಪ, ಕೀರ್ತನಾ ಪಿ., ಶ್ರದ್ಧಾ ಎ.ಎಸ್., ಜಯಶ್ರೀ ಹೆಚ್., ರಶ್ಮಿ ವಿ., ಫಾತಿಮತ್ ಸಾನಿದ, ಸಮೀದ, ಶ್ರುತಿ ರೈ ಹಾಗೂ ಶೋಧನ್ ಪಿ.ಜಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. 

ಪ್ರಥಮ ಎಂಸಿಎ ವಿದ್ಯಾರ್ಥಿನಿಯರಾದ ಚೈತನ್ಯ, ಚೈತನ್ಯ ಕೆ., ಹರಿಣಾಕ್ಷಿ, ಪೂಜಾ, ಶಿಲ್ಪ, ಹಾಗೂ ಶ್ರೇಯಾ ಕಾರ್ಯಕ್ರಮವನ್ನು ಸುಗಮವಾಗಿ ನಿರ್ವಹಿಸುವಲ್ಲಿ ಸಹಕಾರ ನೀಡಿದರು. ಕಾರ್ಯಕ್ರಮದುದ್ದಕ್ಕೂ ವಿದ್ಯಾರ್ಥಿಗಳು ಬದ್ಧತೆ, ಶಿಸ್ತು, ಸೃಜನಶೀಲತೆ ಹಾಗೂ ಅಸಾಮಾನ್ಯ ತಂಡ ಸ್ಪೂರ್ತಿಯನ್ನು ಪ್ರದರ್ಶಿಸಿದರು. ಒಟ್ಟಿನಲ್ಲಿ ಕಾರ್ಯಕ್ರಮವು ಭಾಗವಹಿಸಿದ ಪ್ರತಿಯೋರ್ವನಲ್ಲೂ ಸ್ಪೂರ್ತಿದಾಯಕ ಹಾಗೂ ಅವಿಸ್ಮರಣೀಯ ಭಾವನೆಗಳನ್ನುಂಟುಮಾಡುವಲ್ಲಿ ಯಶಸ್ವಿಯಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article