ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ರಕ್ತದಾನ ಶಿಬಿರ
ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾಲೇಜಿನ ಪರ್ಫಾರ್ಮಿಂಗ್ ಆರ್ಟ್ಸ್ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನೆರವೇರಿಸಿದರು. ಪುತ್ತೂರಿನ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ನ ವೈದ್ಯಕೀಯ ಅಧಿಕಾರಿ ಡಾ. ರಾಮಚಂದ್ರ, ರೊಟೇರಿಯನ್ ಆಸ್ಕರ್ ಆನಂದ್, ಎನ್‌ಎಸ್‌ಎಸ್ ಅಧಿಕಾರಿ ಡಾ. ಚಂದ್ರಶೇಖರ್, ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್ ಜಾನ್ಸನ್ ಡಿ’ಸಿಕ್ವಿಯೆರಾ, ರೋವರ್ಸ್ ನಾಯಕ ಕಲ್ಂದರ್ ಶರೀಫ್ ಉಪಸ್ಥಿತರಿದ್ದರು.
ವೈಆರ್‌ಸಿಯ ಸಂಚಾಲಕಿ ಡಾ. ಡಿಂಪಲ್ ಜೆನಿಫರ್ ಫೆರ್ನಾಂಡಿಸ್ ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕ ಡಾ. ಎಡ್ವಿನ್ ಡಿಸೋಜಾ ವಂದಿಸಿದರು. ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಷ್ಮಾ ಕ್ರಾಸ್ತಾ ನಿರೂಪಿಸಿದರು. ನೌಕಾ ಅಧಿಕಾರಿ ತೇಜಸ್ವಿ ಭಟ್, ರೇಂಜರ್ ಲೀಡರ್ ಶ್ರೀರಕ್ಷಾ ಆರೋಗ್ಯ ಕೇಂದ್ರದ ಉಸ್ತುವಾರಿ ಶಶಿಪ್ರಭಾ ಮತ್ತು ಎನ್‌ಎಸ್‌ಎಸ್ ಅಧಿಕಾರಿ ಪುಷ್ಪಾ ಎನ್. ಸಹಕರಿಸಿದರು.
ಕೆಎಂಸಿ ಆಸ್ಪತ್ರೆ ಮತ್ತು ರೋಟರಿ ಕ್ಯಾಂಪ್ಕೊ ರಕ್ತ ಕೇಂದ್ರದ ವೈದ್ಯಕೀಯ ವೃತ್ತಿಪರರು ಈ ಪ್ರಕ್ರಿಯೆಯು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ನಡೆಸಿಕೊಟ್ಟರು. ದಾನಿಗಳು ಹಿಮೋಗ್ಲೋಬಿನ್ ಮತ್ತು ರಕ್ತದೊತ್ತಡ ತಪಾಸಣೆ ಸೇರಿದಂತೆ ಆರೋಗ್ಯ ತಪಾಸಣೆಗೆ ಒಳಗಾದರು. ದಾನದ ನಂತರದ ಆರೈಕೆ ಮತ್ತು ಉಪಾಹಾರಗಳನ್ನು ಒದಗಿಸಲಾಯಿತು. ಎನ್‌ಸಿಸಿ ಕೆಡೆಟ್‌ಗಳು, ಎನ್‌ಎಸ್‌ಎಸ್ ಸ್ವಯಂಸೇವಕರು, ವೈಆರ್‌ಸಿ ಸ್ವಯಂಸೇವಕರು ನೋಂದಣಿಗಳನ್ನು ನಿರ್ವಹಿಸುವ ಮೂಲಕ, ದಾನಿಗಳಿಗೆ ಸಹಾಯ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಟ್ಟ 187 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ.


