ನೇಣು ಬಿಗಿದು ಆತ್ಮಹತ್ಯೆ
Friday, August 8, 2025
ಉಳ್ಳಾಲ: ರೆಸಾರ್ಟ್ ಒಂದರ ನಿರ್ವಹಣೆ ನಡೆಸುತ್ತಿದ್ದ ವ್ಯಕ್ತಿಯೋರ್ವರು ಅದೇ ರೆಸಾರ್ಟ್‌ನಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ನಡೆಸಿರುವ ಘಟನೆ ಸೋಮೇಶ್ವರ ಮೂಡ ಬಡಾವಣೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ವಸಂತ್ ಸುವರ್ಣ(54) ಆತ್ಮಹತ್ಯೆಗೈದ ದುರ್ದೈವಿ.
ಮೃತ ವಸಂತ್ ಅವರು ಪತ್ನಿಯೊಂದಿಗೆ ಸೋಮೇಶ್ವರದ ಮೂಡ ಬಡಾವಣೆಯ ಖಾಸಗಿ ರೆಸಾರ್ಟ್‌ವೊಂದರ ನಿರ್ವಹಣೆ ನಡೆಸುತ್ತಿದ್ದರು.