ಪೊಳಲಿಯಲ್ಲಿ 12 ಸಾವಿರಕ್ಕು ಅಧಿಕ ಭಕ್ತರಿಗೆ ಸೀರೆ ವಿತರಣೆ
ಶುಕ್ರವಾರ ರಾತ್ರಿ ನವರಾತ್ರಿ ಪೂಜಾಯ ಬಳಿಕ 18 ವರ್ಷ ಮೇಲ್ಪಟ್ಟ ಯುವತಿಯರು, ಸ್ತ್ರೀಯರಿಗೆ ದೇವಿಗೆ ಹರಕೆ ರೂಪದಲ್ಲಿ ಸಂದಾಯವಾಗಿದ್ದ ಸೀರೆಯನ್ನು ಪ್ರಸಾದ ರೂಪದಲ್ಲಿ ವಿತರಿಸುವ ಕಾರ್ಯ ನಡೆಯಿತು.
ರಾಜರಾಜೇಶ್ವರಿ ದೇವಿಗೆ ಸೀರೆಯ ಹರಕೆ ನೆನೆದರೆ ಇಷ್ಟಾರ್ಥಗಳು ಈಡೇರುತ್ತವೆ. ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಇಷ್ಟಾರ್ಥ ಈಡೇರಿದ ಬಳಿಕ ಭಕ್ತರು ಸೀರೆಯನ್ನು ಹರಕೆ ರೂಪದಲ್ಲಿ ಸಮರ್ಪಿಸುವುದು ಹಲವಾರು ದಶಕಗಳ ಸಂಪ್ರದಾಯ. ಹೀಗೆ ಪ್ರತಿವರ್ಷವೂ ಸಹಸ್ರಾರು ಸಂಖ್ಯೆಯ ಸೀರೆಗಳು ಅರ್ಪಣೆಯಾಗುತ್ತಿದ್ದವು. ಆದರೆ, ಒಂದು ಕಾಲದಲ್ಲಿ ಪೊಳಲಿಗೆ ಅರ್ಪಣೆಯಾದ ಸೀರೆಗಳನ್ನು ಉಡುವಂತಿಲ್ಲ ಎಂಬ ನಂಬಿಕೆ ಇತ್ತು. ಕ್ಷೇತ್ರದ ಬ್ರಹ್ಮಕಲಶದ ಸಂದರ್ಭ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಕಳೆದ ೪ ವರ್ಷಗಳಿಂದ ಲಲಿತಾ ಪಂಚಮಿಯ ದಿನ ಹರಕೆಯ ಸೀರೆಗಳನ್ನು ವಿತರಿಸಲಾಗುತ್ತಿದೆ.
ದೇವಳದ ಪ್ರ. ಅರ್ಚಕರಾದ ಮಾಧವ ಭಟ್, ಕೆ. ರಾಮ್ ಭಟ್, ನಾರಾಯಣಭಟ್, ಪರಮೇಶ್ವರ ಭಟ್, ಅನಂತಪದ್ಮನಾಭ ಭಟ್, ದೇವಳದ ಆಡಳಿತ ಮೊಕ್ತೇಸರ, ಡಾ. ಮಂಜಯ್ಯ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಸ್ಥಳೀಯ ಪ್ರಮುಖರಾದ ವೆಂಕಟೇಶ್ ನಾವಡ ಪೊಳಲಿ, ಅಮ್ಮುಂಜೆ ಗುತ್ತು ಶಿವಪ್ರಸಾದ್ ಶೆಟ್ಟಿ, ಕೃಷ್ಣ ಕುಮಾರ್ ಪೂಂಜಾ ಫರಂಗಿಪೇಟೆ, ಚೇರ ರಮೇಶ್ ರಾವ್, ಸುಬ್ರಾಯ ಕಾರಂತ, ಅಮ್ಮುಂಜೆ ಗುತ್ತಿನವರು, ಉಳಿಪಾಡಿ ಗುತ್ತಿನವರು, ಮೊಗರು ಗುತ್ತಿನವರು, ಸಾವಿರ ಸೀಮೆಯ ಭಕ್ತಾಧಿಗಳು ಈ ಸಂದರ್ಭ ಉಪಸ್ಥಿತರಿದ್ದು ಸೀರೆ ವಿತರಣೆಯಲ್ಲಿ ಸಹಕರಿಸಿದರು.