ಕೊಲ್ಲಮೊಗರು ಗ್ರಾಮ ಪಂ.ನ ಸೊತ್ತುಗಳ ಕಳವು: ಉಪಾಧ್ಯಕ್ಷನ ವಿರುದ್ಧ ಕೇಸ್
Friday, September 26, 2025
ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತ್ನಲ್ಲಿ ಸೊತ್ತುಗಳು ಕಳವಾಗಿದ್ದು ಈ ಬಗ್ಗೆ ಪಂಚಾಯತ್ನ ಉಪಾಧ್ಯಕ್ಷರ ಮೇಲೆ ಶಂಕೆ ವ್ಯಕ್ತಪಡಿಸಿ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಾಗಿದೆ.
ಗ್ರಾಮ ಪಂಚಾಯತ್ ಪಿಡಿಒ ದೂರು ನೀಡಿದ್ದು, ಸೆ.25 ರಂದು ಗ್ರಾಮ ಪಂಚಾಯತ್ ಚರಾಸ್ಥಿಗಳನ್ನು ಪರಿಶೀಲನೆ ಮಾಡುವಾಗ ಪಂಚಾಯತ್ನ ಚರಾಸ್ಥಿಗಳಾದ ಹೆಡ್ಫೋನ್, ಧ್ವನಿವರ್ಧಕ ಸ್ಟ್ಯಾಂಡ್, ಮೈಕ್ ಸೆಟ್, ಸಿಸಿ ಕೆಮರಾಗಳು ಕಳವು ಆಗಿರುವುದು ಗಮನಕ್ಕೆ ಬಂದಿದ್ದು, ಕಳವಾದ ಸೊತ್ತುಗಳ ಮೌಲ್ಯ ಹತ್ತು ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಕಳವಾದ ಸೊತ್ತುಗಳು ದುರಸ್ಥಿಯಲ್ಲಿದ್ದು, ಉಪಯೋಗ ಇಲ್ಲದೆ, ದಾಸ್ತಾನು ಇರಿಸಲಾಗಿತ್ತು. ಕಳವಾದ ಸೊತ್ತುಗಳನ್ನು ಪಂಚಾಯತ್ ಉಪಾಧ್ಯಕ್ಷರಾಗಿರುವ ಮಾಧವ ಚಾಂತಾಳ ಅವರು ಕಳವು ಮಾಡಿರುವ ಬಗ್ಗೆ ಸಂಶಯ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.