ಪುದು ಗ್ರಾ.ಪಂ.ನೂತನ ಅಧ್ಯಕ್ಷರಾಗಿ ರಮ್ಲಾನ್, ಉಪಾಧ್ಯಕ್ಷೆಯಾಗಿ ರುಕ್ಸನಾ ಆಯ್ಕೆ

ಪುದು ಗ್ರಾ.ಪಂ.ನೂತನ ಅಧ್ಯಕ್ಷರಾಗಿ ರಮ್ಲಾನ್, ಉಪಾಧ್ಯಕ್ಷೆಯಾಗಿ ರುಕ್ಸನಾ ಆಯ್ಕೆ


ಬಂಟ್ವಾಳ: ತಾಲೂಕಿನ ಪುದು ಗ್ರಾ.ಪಂ.ನ ಮುಂದಿನ ಎರಡೂವರೆ ವರ್ಷಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ರಮ್ಲಾನ್ ಮಾರಿಪಳ್ಳ ಅಧ್ಯಕ್ಷರಾಗಿಯು, ರುಕ್ಸನಾ ಅಮ್ಮೆಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಗುರುವಾರ ಸಂಜೆ ಪುದು ಗ್ರಾ.ಪಂ.ಕಚೇರಿಯಲ್ಲಿ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಅವರು ಗ್ರಾ.ಪಂ.ನ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.ಪಿಡಿಒ ಹರೀಶ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

ನೂತನ ಅಧ್ಯಕ್ಷ ರಮ್ಲಾನ್ ಅವರು ಈ ಹಿಂದೆ 2017 ರಿಂದ 2022 ರವರೆಗೆ ಪೂರ್ತಿ ಐದು ವರ್ಷ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ಸ್ಪೀಕರ್ ಯು.ಟಿ. ಖಾದರ್ ಅಪ್ತರಲ್ಲೊಬ್ಬರಾಗಿದ್ದಾರೆ.

ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂ. ವರ್ಗ ’ಎ’ಮಹಿಳೆಗೆ ಮೀಸಲಿಡಲಾಗಿತ್ತು.

34 ಸದಸ್ಯ ಬಲ ಹೊಂದಿರುವ ಪುದು ಗ್ರಾ.ಪಂ.ನಲ್ಲಿ 21 ಮಂದಿ ಕಾಂಗ್ರೆಸ್ ಬೆಂಬಲಿತರು, 7 ಎಸ್‌ಡಿಪಿಐ ಹಾಗೂ 6 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದು, ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯ ವೇಳೆ ಇಬ್ಬರು ಕಾಂಗ್ರೆಸ್ ಬೆಂಬಲಿತ ಸದಸ್ಯರು ಗೈರು ಹಾಜರಾಗಿದ್ದರೆನ್ನಲಾಗಿದೆ.

ಆದರೂ ಸಂಖ್ಯಾ ಬಲದಲ್ಲಿ ರಮ್ಲಾನ್-ಖೈರುನ್ನಿಸಾ ಅವರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ.

ಬಿಜೆಪಿ ಬೆಂಬಲಿತ ಸದಸ್ಯರಾದ ಸುಬ್ರಹ್ಮಣ್ಯ ಭಟ್ ಹಾಗೂ ವಿದ್ಯಾ ಅವರು ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಕ್ರಮವಾಗಿ ನಾಮಪತ್ರ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ,ಕೆ.ಪಿ.ಸಿ.ಸಿ. ಸದಸ್ಯ ಉಮ್ಮರ್ ಫಾರೂಕ್ ಪರಂಗಿಪೇಟೆ, ನಿಕಟಪೂರ್ವ ಅಧ್ಯಕ್ಷೆ ರಶೀದಾ ಬಾನು, ಉಪಾಧ್ಯಕ್ಷ ಇಕ್ಬಾಲ್ ಸುಜೀರು, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ಅಹಮದ್ ದಿರ್ಶಾದ್, ಸ್ಥಳೀತ ಮುಖಂಡರುಗಳು ಉಪಸ್ಥಿತರಿದ್ದು ಶುಭಹಾರೈಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article