ತುಂಬೆ ಶ್ರೀಶಾರದೋತ್ಸವಕ್ಕೆ ರಜತ ಸಂಭ್ರಮ: ಸಮುದಾಯ ಭವನದ ಲೋಕಾರ್ಪಣೆ
ಗುರುವಾರ ಸಂಜೆ ತುಂಬೆ ಶ್ರೀ ಶಾರದಾ ಸಭಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, 24 ವರ್ಷದ ಹಿಂದೆ ತುಂಬೆ ಪರಿಸರದಲ್ಲಿ ಧಾರ್ಮಿಕ ಮತ್ತು ಸಂಘಟನಾತ್ಮಕ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದ ಯುವಕರ ಸಂಘಟನೆ ಇದೀಗ ರಜತ ವರ್ಷದ ಶಾರದಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದೆ ಎಂದರು.
ಸಮಿತಿಯು ಸುಮಾರು 22 ಸೆಂಟ್ಸ್ ಜಾಗವನ್ನು ಖರೀದಿಸಿ ಸಣ್ಣ ಪ್ರಮಾಣದ ಸಭಾಭವನವನ್ನು ತಳ ಅಂತಸ್ತಿನಲ್ಲಿ ನಿರ್ಮಿಸಿತ್ತು. ಇದೀಗ ರಜತ ಮಹೋತ್ಸವದ ಸವಿನೆನಪಿಗಾಗಿ ಸುಮಾರು 1.50 ಕೋ.ರೂ. ವೆಚ್ಚದಲ್ಲಿ ಮಿರ್ಮಾಣವಾಗಿರುವ 1600 ಚದರ ಅಡಿಯ ಸುಸಜ್ಜಿತವಾದ ಸಮುದಾಯ ಭವನ ಲೋಕಾರ್ಪಣೆಗೆ ಸಜ್ಜಾಗಿದೆ ಎಂದರು.
ಸೆ.27 ರಂದು ಸಂಜೆ ಪೊಳಲಿ ಶ್ರೀ ಗಿರಿಪ್ರಕಾಶ್ ತಂತ್ರಿಗಳ ನೇತೃತ್ವದಲ್ಲಿ ವೈದಿಕ ವಿಧಿ-ವಿಧಾನಗಳು ನೆರವೇರಲಿದೆ. ಸೆ.೨೮ ರಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಮ್. ಎನ್. ರಾಜೇಂದ್ರ ಕುಮಾರ್ ಅವರು ಸಭಾಭವನವನ್ನು ಉದ್ಘಾಟಿಸಿ ಲೋಕಾರ್ಪಣೆಗೊಳಿಸಲಿದ್ದಾರೆ.
ದ.ಕ ಜಿಲ್ಲಾ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಉದ್ಯಮಿ ಕೃಷ್ಣಪ್ರಸಾದ್ ಶೆಟ್ಟಿ ಪೇರ್ಲಬೈಲು ಯುಎಸ್‌ಎ ಅವರು ದೀಪ ಪ್ರಜ್ವಲನೆಗೈಯಲಿದ್ದಾರೆ. ಸಾಮಾಜಿಕ, ಧಾರ್ಮಿಕ, ರಾಜಕೀಯ, ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸಂಜೆ ಮಕ್ಕಳು ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಸೆ.29 ರಂದು ಬೆಳಗ್ಗೆ ಶ್ರೀ ಶಾರದ ಮಾತೆಯ ಪ್ರತಿಷ್ಠೆ ನಡೆಯಲಿದ್ದು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ರಜತ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶ್ರೀ ಕನಪಾಡಿತ್ತಾಯ ದೈವದ ಪಾತ್ರಿ ಧೂಮ ಮೂಲ್ಯ ಧ್ವಜಾರೋಹಣ ಮಾಡಲಿದ್ದಾರೆ.
ಬಳಿಕ ಭಜನಾ ಸಂಕೀರ್ತನೆ, ಹೂಹಾರಕಟ್ಟುವ ಸ್ಪರ್ಧೆ, ಧಾರ್ಮಿಕ ಸಭೆ,ಮಹಾಪೂಜಾಎ,ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ ಎಂದು ವಿವರಿಸಿದ ಅವರು ರಾತ್ರಿ ಶಾರದಮಾತೆಗೆ ವಿಶೇಷವಾಗಿ ದೀಪಾಲಂಕಾರ ಸಹಿತ ಅಲಂಕಾರ ಪೂಜೆ ನೆರವೇರಲಿದೆ.ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಸ್ಥಳೀಯ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.
ಸೆ.30 ರಂದು ಬೆಳಿಗ್ಗೆ ಭಜನೆ, ಚಂಡಿಕಾ ಹೋಮ, ಮಧಗಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ ಶಾರದ ಮಾತೆಯ ವೈಭವಪೂರ್ಣವಾದ ಶೋಭಾಯಾತ್ರೆ ನಡೆಯಲಿದೆ ಎಂದರು.
ರಜತ ವೀಣೆ ಸಮರ್ಪಣೆ:
ಶಾರದೋತ್ಸವಕ್ಕೆ ರಜತ ಸಂಭ್ರಮದ ನೆನಪಿಗಾಗಿ ಸುಮಾರು 4.25 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ‘ರಜತ ವೀಣೆ’ಯನ್ನು ಶಾರದಮಾತೆಗೆ ಸಮರ್ಪಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಶ್ರೀ ಶಾರದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ತಿಳಿಸಿದರು.
ಸಮಿತಿಯ ಪದಾಧಿಕಾರಿಗಳಾದ ರಾಘವ ಬಂಗೇರ ಪೇರ್ಲಬೈಲ್, ಜಯಪ್ರಕಾಶ್ ತುಂಬೆ, ರವೀಂದ್ರ ಕಂಬಳಿ, ಯೋಗೀಶ್ ಕೋಟ್ಯಾನ್, ದಿವಾಕರ ಪೇರ್ಲಬೈಲು ತುಂಬೆ, ಶೋಭಾಗೋಪಾಲ ಮೈಂದಾನ್, ನಾರಾಯಣ ಕಿರೋಡಿಯನ್, ವಿಜಯ ಕಜೆಕಂಡ, ಸದಾನಂದ ಕೋಡಿಯಡ್ಕ, ಗೋಪಾಲ ಬೆದ್ರಾಡಿ, ಆರ್.ಎಸ್. ಜಯ, ಉಮಾಲಿಂಗಪ್ಪ ಕುಲಾಲ್, ಸಂತೋಷ್ ಕೋಟ್ಯಾನ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು.