ಅತಿಥಿ ಶಿಕ್ಷಕರನ್ನು ಸಮೀಕ್ಷೆಯಿಂದ ಕೈಬಿಡುವಂತೆ ಒತ್ತಾಯ: ವೀರಕಂಬಗ್ರಾಮದಲ್ಲಿ ಸಮೀಕ್ಷೆಗೆ ಚಾಲನೆ
ವೀರಕಂಬಗ್ರಾಮದ ಮಜಿ ಶಾಲಾ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ. ನೇತೃತ್ವದಲ್ಲಿ ವೀರಕಂಭ ಗ್ರಾಮದ ಕೆಲಿಂಜ ಕೊಟ್ಟಾರಿ ಕಟ್ಟೆ, ಬೆಂಜತಿಮಾರ್ ಪ್ರದೇಶದಲ್ಲಿ ಗಣತಿ ಆರಂಭಿಸಲಾಗಿದ್ದು, ಈ ಸಂದರ್ಭ ವೀರಕಂಭ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರೆಹಿಮಾನ್ ಉಪಸ್ಥಿತರಿದ್ದರು.
ಕೈಬಿಡುವಂತೆ ಒತ್ತಾಯ:
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಅತಿಥಿ ಶಿಕ್ಷಕರನ್ನು ದೂರದ ಊರಿಗೆ ನಿಯೋಜಿಸುವ ಜತೆಗೆ ಅವರಿಗೆ ಯಾವುದೇ ರೀತಿಯ ಸೇವಾ ಭದ್ರತೆಯೂ ಇರುವುದಿಲ್ಲ ಈ ನಿಟ್ಟಿನಲ್ಲಿ ಸಮೀಕ್ಷೆಯಿಂದ ಕೈ ಬಿಡುವಂತೆ ಬಂಟ್ವಾಳ ತಾಲೂಕು ಅತಿಥಿ ಶಿಕ್ಷಕರ ಸಂಘದ ನಿಯೋಗ ಬಂಟ್ವಾಳ ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರನ್ನು ಭೇಟಿಯಾಗಿ ಒತ್ತಾಯಿಸಿದೆ.
ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಉಪತಹಶೀಲ್ದಾರ್ ನರೇಂದ್ರನಾಥ ಮಿತ್ತೂರು ಅವರನ್ನು ಭೇಟಿಯಾಗಿ ಅತಿಥಿ ಶಿಕ್ಷಕರನ್ನು ಪರಿಚಯ ಇಲ್ಲದ ಜಾಗಗಳಿಗೆ ಸಮೀಕ್ಷೆಗೆ ನಿಯೋಜಿಸಲಾಗಿದೆಯಲ್ಲದೆ ಯಾವುದೇ ಸೇವಾ ಭದ್ರತೆಯು ಇಲ್ಲದಿದ್ದು, ಶಿಕ್ಷಕರ ಕೊರತೆಯ ಹಿನ್ನಲೆಯಲ್ಲಿ ತಾತ್ಕಾಲಿಕ ಮಕ್ಕಳಿಗೆ ಪಾಠ ಮಾಡುತ್ತಿದ್ದು, ಈ ಸಮೀಕ್ಷೆಗೂ ನಮಗೂ ಯಾವುದೇ ಸಂಬಂಧ ಇರುವುದಿಲ್ಲ, ಹೀಗಾಗಿ ಅತಿಥಿ ಶಿಕ್ಷಕರನ್ನು ಸಮೀಕ್ಷೆಯಿಂದ ಕೈ ಬಿಡುವಂತೆ ಒತ್ತಾಯಿಸಿದ್ದಾರೆ.