ಆನ್‌ಲೈನ್ ವಂಚನೆ: ಆತ್ಮಹತ್ಯೆ
Tuesday, September 9, 2025
ಕಾರ್ಕಳ: ವಂಚನೆಯಿಂದ ಹಣ ಕಳೆದುಕೊಂಡ ಚಿಂತೆಯಲ್ಲಿ ಜಾರ್ಖಂಡ್ ಮೂಲದ ಕಾರ್ಮಿಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತರನ್ನು ಜಾರ್ಖಂಡ್ ರಾಜ್ಯದ ಲೆತಿಹಾರ್ರನ ಸುಜೇಕ ರಾಮ್ (19) ಎಂದು ಗುರುತಿಸಲಾಗಿದೆ. ಕಡ್ತಲ ಗ್ರಾಮದ ಚೆನ್ನಿಬೆಟ್ಟು ಎಂಬಲ್ಲಿನ ಕುರಿಯಕೋಸ್ ಎಂಬವರ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದ ಇವರು, ಆ.15ರಂದು ರೂಮ್‌ನಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಆ.15ರಂದು ಸುಚೇಕ ರಾಮ್ ಮೊಬೈಲ್ ಮೂಲಕ ಬಂದ ಸಂದೇಶಕ್ಕೆ ಸ್ಪಂದನ ಮಾಡಿದ್ದು, ಇದರಿಂದ ಅವರು 7,000 ರೂ. ಕಳೆದುಕೊಂಡಿದ್ದರು. ಇದೇ ಕಾರಣಕ್ಕೆ ನೊಂದು ವಿಷ ಸೇವಿಸಿ ಆತ್ಮಹತೆ ಮಾಡಿ ಕೊಂಡಿದ್ದಾರೆ ಎಂದು ಮೃತರ ಅಣ್ಣ ಮನುರಾಮ್ ನೀಡಿದ ದೂರಿನಂತೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.