ಇನ್ನೆಷ್ಟು ಜೀವ ಬಲಿಯಾಗಬೇಕು ಜನಪ್ರತಿನಿಧಿಗಳೇ?: ಪದ್ಮರಾಜ್ ಆರ್. ಪೂಜಾರಿ

ಇನ್ನೆಷ್ಟು ಜೀವ ಬಲಿಯಾಗಬೇಕು ಜನಪ್ರತಿನಿಧಿಗಳೇ?: ಪದ್ಮರಾಜ್ ಆರ್. ಪೂಜಾರಿ


ಮಂಗಳೂರು: ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ಹಾಗೂ ಇನ್ನಿತರ ರಸ್ತೆಗಳ ದುರವಸ್ಥೆಯಿಂದ ಅನೇಕ ಜೀವ ಬಲಿಯಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಮೂಕರಾಗಿರುವುದು ವಿಷಾದನೀಯ ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮನೆಯಿಂದ ಕೆಲಸಕ್ಕಾಗಿ ಹೊರಟವರು ರಸ್ತೆಯ ಅವ್ಯವಸ್ಥೆಯಿಂದ ಶವವಾಗುತ್ತಿರುವುದು ಖೇದಕರ ಸಂಗತಿ. ಬಹಳಷ್ಟು ದಿನಗಳಿಂದ ರಸ್ತೆಗೆ ಸಂಬಂಧ ಪಟ್ಟ ಅಧಿಕಾರಿಗಳು ನೋಡುತ್ತಲೇ ಇದ್ದಾರೆ ಹೊರತು ಮನುಷ್ಯನ ಜೀವ ರಕ್ಷಣೆಯ ಬಗ್ಗೆ ಕ್ರಮ ಕೈಗೆತ್ತಿಕೊಳ್ಳುವುದಿಲ್ಲ ಯಾಕೆ?

ರಸ್ತೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೇವಲ ಸಂಬಳವನ್ನು ಪಡೆಯುವುದಕ್ಕಾಗಿ ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆಯೆ ಎಂಬ ಸಂಶಯ ನಮ್ಮನ್ನು ಕಾಡುತ್ತಿದೆ.

ರಸ್ತೆ ಅಪಘಾತಗಳಾಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿ ಚಿಂತಾಜನಕ ಸ್ಥಿಯಲ್ಲಿರುವ ಹಾಗೂ ಮರಣವನ್ನಪ್ಪಿದ ಅದೆಷ್ಟೋ ಜೀವವನ್ನು ಬಲಿತೆಗೆದುಕೊಂಡ ಘಟನೆಗಳಿಗೆ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧ ಪಟ್ಟ ಮುಖ್ಯ ಅಧಿಕಾರಿಗಳೇ ನೇರ ಹೊಣೆ.

ಇಲಾಖೆಯಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಿದ್ದರೆ ನೇರವಾಗಿ ಮನೆಗೆ ಹೋಗಲಿ. ನಮ್ಮ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಗಮನಹರಿಸಿ ಇನ್ನಾದರೂ ಮನುಷ್ಯನ ಜೀವಗಳು ಅಪಾಯಕ್ಕೆ ಸಿಲುಕದ ರೀತಿ ತಮ್ಮ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಹಾಗೂ ಶಾಸಕರಲ್ಲಿ ಆಗ್ರಹಿಸುತ್ತೇನೆ ಎಂದು ಪದ್ಮರಾಜ್ ಆರ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article