ಅಪ್ರಾಪ್ತ ಬಾಲಕನೊಂದಿಗೆ ಎರಡು ಮಕ್ಕಳು ತಾಯಿ ಪರಾರಿ: ಕೊಲ್ಲೂರಿನಲ್ಲಿ ಪತ್ತೆ

ಅಪ್ರಾಪ್ತ ಬಾಲಕನೊಂದಿಗೆ ಎರಡು ಮಕ್ಕಳು ತಾಯಿ ಪರಾರಿ: ಕೊಲ್ಲೂರಿನಲ್ಲಿ ಪತ್ತೆ

ಕೊಲ್ಲೂರು/ಕೇರಳ: ಹದಿನೇಳು ವರ್ಷದ ಅಪ್ರಾಪ್ತ ಬಾಲಕನೊಂದಿಗೆ ಎರಡು ಮಕ್ಕಳ ತಾಯಿ ಪರಾರಿಯಾದ ಘಟನೆ ಕೇರಳದ ಪಲ್ಲಿಪುರಂ ಎಂಬಲ್ಲಿ ನಡೆದಿದ್ದು, ಪಲ್ಲಿಪುರಂ ಮೂಲದ ಸನುಷಾಳನ್ನು ಕೊಲ್ಲೂರಿನಲ್ಲಿ ಚೇರ್ತಲ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಎರಡು ಮಕ್ಕಳ ತಾಯಿಯಾಗಿರುವ ಸನುಷಾ ಹದಿನೇಳು ವರ್ಷ ವಿಧ್ಯಾರ್ಥಿ ಜೊತೆ 12 ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಬಾಲಕ ನಾಪತ್ತೆಯ ಬಗ್ಗೆ ಆತನ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.  ಇನ್ನೊಂದೆಡೆ ಮಹಿಳೆಯ ಸಂಬಂಧಿಕರೂ ಆಕೆಯ ನಾಪತ್ತೆ ಬಗ್ಗೆ ದೂರು ನೀಡಿದ್ದರು. ನಾಪತ್ತೆಯಾದ ಇಬ್ಬರೂ ಯಾವುದೇ ತಮ್ಮ ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರು. 

ಪೊಲೀಸರು ಮೊದಲು ಬೆಂಗಳೂರಿನಲ್ಲಿ ಹುಡುಕಾಡಿದ್ದಾರೆ. ಈ ನಡುವೆ ಮಹಿಳೆ ತನ್ನ ಫೋನ್ ಅನ್ನು ಆನ್ ಮಾಡಿ ತನ್ನ ಸಂಬಂಧಿಕರಿಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದಾಗ ಸಿಕ್ಕಿಬಿದ್ದರು. ಇದರ ನಂತರ, ಚೆರ್ತಲ ಪೊಲೀಸರು ಕೊಲ್ಲೂರು ತಲುಪಿ ಆಕೆಯನ್ನು ಬಂಧಿಸಿದರು. ಅವರಿಬ್ಬರನ್ನೂ ಮಕ್ಕಳೊಂದಿಗೆ ಮನೆಗೆ ಕರೆತಂದ ಪೊಲೀಸರು, ವಿದ್ಯಾರ್ಥಿಯನ್ನು ಪೋಷಕರ ಬಳಿಗೆ ಕಳುಹಿಸಿದ್ದಾರೆ. ಮಹಿಳೆಯ ಮಕ್ಕಳನ್ನು ಮಹಿಳೆಯ ಪತಿಗೆ ಒಪ್ಪಿಸಲಾಯಿತು. 

ಮಹಿಳೆ ಪೊಲೀಸರಿಗೆ ತಾವು ಒಟ್ಟಿಗೆ ವಾಸಿಸಲು ಬಯಸಿದ್ದರಿಂದ ಓಡಿಹೋಗಿದ್ದೇವೆ ಎಂದಿದ್ದಾಳೆ. ಆರೋಪಿ ಮಹಿಳೆಯ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕುಟುಂಬ ಕಾರ್ಯಕ್ರಮವೊಂದರಲ್ಲಿ ಮಹಿಳೆ ಮತ್ತು ಅಪ್ರಾಪ್ತ ವಯಸ್ಕ ಭೇಟಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.  

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article