 
ಕುಂದಾಪುರದಲ್ಲಿ ಕಾನೂನು ವಿದ್ಯಾಲಯ ಆರಂಭ
ಅವರು ಇಲ್ಲಿನ ಫೋರ್ಟ್ ಗೇಟ್ ಎಜುಕೇಶನಲ್ ಟ್ರಸ್ಟ್ ವತಿಯಿಂದ ಆರಂಭವಾದ ಓಕ್ ವುಡ್ ಲಾ ಕಾಲೇಜಿನ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಷ್ಠಿ ಅಭಿನಂದನ್ ಶೆಟ್ಟಿಯವರ ಅಜ್ಜ ವಿ.ಕೆ. ಶೆಟ್ಟಿ ನ್ಯಾಯಾಧೀಶರಾಗಿದ್ದರು. ತಂದೆಯೂ ವಕೀಲರು. ಇದೀಗ ಮೂರನೇ ತಲೆಮಾರಿನಲ್ಲಿ ಕಾನೂನು ವಿದ್ಯಾಲಯವನ್ನೇ ಸ್ಥಾಪಿಸುವುದರ ಮೂಲಕ ಅವರು ಸಮಾಜಕ್ಕೆ ಒಂದೊಳ್ಳೆಯ ಕಾಣಿಕೆ ನೀಡಿದ್ದಾರೆ. ಗುಣಮಟ್ಟದ ಕಾನೂನು ಶಿಕ್ಷಣ ನೀಡುವ ಮೂಲಕ ಕಾನೂನು ಕಾಲೇಜು ಅಭಿವೃದ್ಧಿ ಹೊಂದಲಿ ಎಂದು ಅವರು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಫೋರ್ಟ್ ಗೇಟ್ ಎಜುಕೇಶನಲ್ ಟ್ರಸ್ಟ್‌ನ ಹಿರಿಯ ಟ್ರಸ್ಟಿ ಅರುಣ್ ಕುಮಾರ್ ಶೆಟ್ಟಿ ವಹಿಸಿದ್ದರು.
ಮೆನೇಜಿಂಗ್ ಟ್ರಸ್ಟಿ ಅಭಿನಂದನ್ ಶೆಟ್ಟಿ ಪ್ರಸ್ತಾವಿಸಿ, ಬಹಳ ವರ್ಷಗಳ ಬಳಿಕ ಈ ಭಾಗದ ಕಾನೂನು ಕಾಲೇಜು ಆರಂಭದ ಕನಸು ನನಸಾಗಿದೆ. ವಿದ್ಯಾಕ್ಷೇತ್ರದ ಅನುಭವ, ಜನರ ಪ್ರೋತ್ಸಾಹ, ಅದರಿಂದ ದೊರೆತ ಫಲಿತಾಂಶದ ಕಾರಣದಿಂದ ರಾಜಿಯಿಲ್ಲದ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂಬ ಸದುದ್ದೇಶದಿಂದ ಈ ಕಾಲೇಜು ಆರಂಭಿಸಲಾಗಿದೆ. ಇಲ್ಲಿ ಕೇವಲ ಪದವಿ ಗಳಿಕೆ ಎಂದಾಗಬಾರದು. ನೈಜ ಕೌಶಲ, ಜ್ಞಾನದ ಅನುಭವ ದೊರೆಯಬೇಕು. ಆ ನಿಟ್ಟಿನಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಕರ್ನಾಟಕ ಲಾ ಯೂನಿವರ್ಸಿಟಿ ಹಾಗೂ ಸರ್ಕಾರದ ಕಾನೂನು ಮಂತ್ರಾಲಯಗಳ ಅನುಮೋದನೆ ಪಡೆದು ಕಾಲೇಜು ಆರಂಭಿಸಲಾಗಿದೆ ಎಂದರು.
ಜಂಟಿ ಮ್ಯಾನೇಜಿಂಗ್ ಟ್ರಸ್ಟಿ ನೀತಾ ಎ. ಶೆಟ್ಟಿ, ಪ್ರಾಂಶುಪಾಲೆ ಶ್ರುತಿ ಹೆಗಡೆ, ಉಪ ಪ್ರಾಂಶುಪಾಲ ದಿನಕರ ಎಲ್. ತೋನ್ಸೆ ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯದರ್ಶಿ ಸಹನಾ ಶೆಟ್ಟಿ ಸ್ವಾಗತಿಸಿದರು. ವಿಜೇತ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.