
ಕಾಂಗ್ರೆಸ್ ಸರ್ಕಾರದಿಂದ ಗೊಂದಲ ಸೆ.20 ರಂದು ‘ದುಂಡು ಮೇಜಿನ ಸಭೆ’
Thursday, September 18, 2025
ಮಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನೆಡಸಲು ಹೊರಟಿರುವ ರಾಜ್ಯ ಸರ್ಕಾರ ಕ್ರೈಸ್ತರನ್ನು ಹಿಂದು ಜಾತಿಗಳ ನಡುವೆ ಎಳೆದು ತಂದು ಎಲ್ಲ ಸಮಾಜಗಳನ್ನು ದಿಕ್ಕು ತಪ್ಪಿಸುತ್ತಿದೆ.
ಜಾತಿ ಸಮೀಕ್ಷೆಯ ಹೆಸರಲ್ಲಿ ಹೊಸ ಕ್ರೈಸ್ತ ಜಾತಿಗಳನ್ನು ಸೃಷ್ಟಿಸಿ ಗೊಂದಲ ನಿರ್ಮಿಸಿರುವುದನ್ನು ಖಂಡಿಸಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ‘ದುಂಡು ಮೇಜಿನ ಸಭೆ’ಯು ಸೆ.20 ರಂದು ಸಂಜೆ 3 ಗಂಟೆಗೆ ಬಾಲಂ ಭಟ್ ಹಾಲ್ ರಾಧಾಕೃಷ್ಣ ಮಂದಿರ ಮಂಗಳೂರಿನಲ್ಲಿ ನಡೆಯಲಿದ್ದು, ಈ ಸಭೆಯಲ್ಲಿ ಸಾಧು ಸಂತರು ಮಾರ್ಗದರ್ಶನ ಮಾಡಲಿದ್ದು, ಎಲ್ಲಾ ಸಮಾಜದ ಪ್ರಮುಖರು, ಧಾರ್ಮಿಕ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮುಂದಿನ ಹೋರಾಟಕ್ಕೆ ಸಲಹೆ ಸೂಚನೆ ನೀಡಲು ವಿನಂತಿ ಎಂದು ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ಇದರ ಪ್ರಮುಖರಾದ ಶಿವಾನಂದ್ ಮೆಂಡನ್ ಪ್ರಕಟಣೆಯಲ್ಲಿ ತಿಳಿಸಿದರು.