ಚಿನ್ನಯ್ಯನಿಗೆ ಮತ್ತೆ 3 ದಿನ ಕಸ್ಟಡಿ
Wednesday, September 3, 2025
ಮಂಗಳೂರು: ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಪೊಲೀಸ್ ಕಸ್ಟಡಿ ಬುಧವಾರಕ್ಕೆ ಕೊನೆಗೊಂಡ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ಅವರು ಮತ್ತೆ ಆತನನ್ನು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಈ ವೇಳೆ ನ್ಯಾಯಾಧೀಶರು ಚಿನ್ನಯ್ಯನಿಗೆ ಮೂರು ದಿನಗಳ ಪೊಲೀಸ್ ಕಸ್ಟಡಿ ವಿಸ್ತರಿಸಿದ್ದಾರೆ.
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿನ್ನಯ್ಯನ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಕೋರ್ಟ್‌ಗೆ ಕರೆತರಲಾಗಿದೆ. 10 ದಿನಗಳ ಕಸ್ಟಡಿಯಲ್ಲಿ ಚಿನ್ನಯ್ಯನನ್ನು ಆತನಿಗೆ ಆಶ್ರಯ ನೀಡಿದ ಬೆಂಗಳೂರಿನ ಜಯಂತ್ ನಿವಾಸ ಹಾಗೂ ಉಜಿರೆಯ ಕೆಲವು ಸ್ಥಳಗಳಿಗೆ ಕರೆದುಕೊಂಡು ಹೋಗಿ ಎಸ್‌ಐಟಿ ತಂಡ ಮಹಜರು ನಡೆಸಿತ್ತು. ಆದರೆ ಚಿನ್ನಯ್ಯ ವಾಸವಿದ್ದ ಮಂಡ್ಯ ಹಾಗೂ ತಮಿಳುನಾಡಿನ ಮನೆ ಹಾಗೂ ಮತ್ತಿತರ ಕಡೆಗಳ ಸ್ಥಳ ಮಹಜರು ಪ್ರಕ್ರಿಯೆ ಇನ್ನೂ ನಡೆದಿಲ್ಲ. ಈ ಕಾರಣಕ್ಕೆ ಎಸ್‌ಐಟಿ ಅಧಿಕಾರಿಗಳು ಮತ್ತೆ ಮೂರು ದಿನ ಅಂದರೆ ಸೆ. 6ರ ವರೆಗೆ ಚಿನ್ನಯ್ಯನನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.