ಸಬಲೀಕರಣವು ಕೇವಲ ಮಹಿಳೆಯರ ಬಗ್ಗೆ ಅಲ್ಲ ಅದು ಪುರುಷರ ಬಗ್ಗೆಯೂ ಸಮಾನಾವಾಗಿದೆ: ಡಾ. ಸುಪ್ರಿಯಾ ಹೆಗ್ಡೆ ಆರೂರ್
Thursday, September 25, 2025
ಮಂಗಳೂರು: ಸಬಲೀಕರಣವು ಕೇವಲ ಮಹಿಳೆಯರ ಬಗ್ಗೆ ಅಲ್ಲ ಅದು ಪುರುಷರ ಬಗ್ಗೆಯೂ ಸಮಾನಾವಾಗಿದೆ. ಎರಡೂ ಲಿಂಗಗಳು ಸಮತೋಲನವನ್ನು ಕಂಡುಕೊಳ್ಳಬೇಕು ಎಂದು ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಪಕಿ ಮತ್ತು ಮುಖ್ಯಸ್ಥೆ ಡಾ. ಸುಪ್ರಿಯಾ ಹೆಗ್ಡೆ ಆರೂರ್ ಅವರು ಹೇಳಿದರು.
ಕೊಡಿಯಾಲ್ ಬೈಲ್ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಎಕ್ಸ್‌ಪೋಡಿಯಂನಲ್ಲಿ ನಡೆದ ‘ನವಶಕ್ತಿ 2025’ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು.
ನವಶಕ್ತಿ ಕಾರ್ಯಕ್ರಮವನ್ನು ಡಾ. ಸುಪ್ರಿಯಾ ಹೆಗ್ಡೆ ಆರೂರ್, ಡಾ.ಉಷಾಪ್ರಭಾ ಎನ್ ನಾಯಕ್, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ರಶ್ಮಿ, ಉಪನ್ಯಾಸಕಿ ವಿದ್ಯಾಪ್ರಭು, ರಜನಿ, ಕನ್ನಡ ವಿಭಾಗದ ಮುಖ್ಯಸ್ಥೆ ರಮ್ಯಾ ಅನಿಲ್, ಹಿಂದಿ ವಿಭಾಗದ ಉಪನ್ಯಾಸಕಿ ಅಶ್ವಿನಿ ಪೈ, ಕಛೇರಿ ಸಿಬ್ಬಂದಿ ಸೌಮ್ಯ, ಸರಿತಾ ಹೀಗೆ ನವರಾತ್ರಿಯ ಹಿನ್ನಲೆಯಲ್ಲಿ ಒಂಬತ್ತು ಮಹಿಳೆಯರು ನವದೀಪಗಳನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಉದ್ಘಾಟಿಸಿದರು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್ ನಾಯಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಐಟಿ ನಿರ್ದೇಶಕ ಶ್ರೀ ಅಂಕುಶ್ ಎನ್ ನಾಯಕ್, ಸಂಸ್ಥೆಯ ಅರ್ಕಿಟೆಕ್ಟ್ ದೀಪಿಕಾ ಎ.ನಾಯಕ್ ಉಪಸ್ಥಿತರಿದ್ಧರು.
ಎಕ್ಸ್‌ಪರ್ಟ್ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನವದೀಪಗಳನ್ನು ಹಚ್ಚುವ ಮೂಲಕ ಮತ್ತು ಹೊಸ ಅಕ್ಕಿಯನ್ನು ತುಂಬುವ, ಸಿರಿಯನ್ನು ಅರಳಿಸುವ ಬಣ್ಣದ ಕೊಡೆಗಳ ಮೆರವಣಿಗೆ ಹೀಗೆ ನವಶಕ್ತಿ ಕಾರ್ಯಕ್ರಮದ ವರ್ಣರಂಜಿತ ಉದ್ಘಾಟಿಸುವ ಶೈಲಿಯು ಎಲ್ಲರ ಗಮನ ಸೆಳೆಯಿತು. ರಿಷಿಕ್ ಮತ್ತು ಶ್ರದ್ದಾ ಅಜಿತ್ ಮಿಸ್ಟರ್ ಮತ್ತು ಮಿಸ್ ಎಕ್ಸ್-ವೋಗ್ ವಿಜೇತರಾಗಿ ಹೊರಹೊಮ್ಮಿದರು. ಕಾರ್ಯಕ್ರಮ ನಿರ್ದೇಶಕಿ ಭುವನೇಶ್ವರಿ ವಂದಿಸಿದರು.
ನವರಾತ್ರಿ ಹಬ್ಬದ ಸಂದಂರ್ಭದಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ. ನಮ್ಮಲ್ಲಿರುವ ದೌರ್ಬಲ್ಯಗಳನ್ನು ತೊಡೆದುಹಾಕಿ ನಮಗೆ ನಾವೇ ಮನೋವೈದ್ಯರಾಗಿ ನಮ್ಮಲ್ಲಿರು ಮನಸ್ಸನ್ನು ಜಾಗ್ರತಗೊಳಿಸಿ ನಿರಂತರ ಪ್ರಯತ್ನದ ಮೂಲಕ ಸಾಧನೆಯ ಪಥವನ್ನು ತಲುಪಬೇಕು ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರೊ ನರೇಂದ್ರ ಎಲ್. ನಾಯಕ್ ಅವರು ಹೇಳಿದರು.
ಪ್ರತಿಯೊಬ್ಬ ಮನುಷ್ಯನೊಳಗಿರುವ ದ್ವಂದ್ವತೆಯ ಬಗ್ಗೆ ಪ್ರಸ್ತಾಪಿಸುವ ಮೂಲಕ ದುರ್ಬಲ ಭಾಗವು ನಮ್ಮನ್ನು ಭಾರವಾಗಿಸಬಹುದು, ಆದರೆ ಬಲವಾದ ಭಾಗವು ಯಾವುದೇ ಅಡೆತಡೆಗಳಿದ್ದರೂ ಅದನ್ನು ನಿವಾರಿಸುವ ಶಕ್ತಿಯನ್ನು ನೀಡುತ್ತದೆ ಎಂದರು.
ಅಸುರ ಅಂಶವು ನಮ್ಮೊಳಗಿರುವ ನಕಾರಾತ್ಮಕ ಅಂಶಗಳನ್ನು ಪ್ರತಿನಿಧಿಸುತ್ತದೆ. ಸಮಾಜದ ಒಳಿತಿಗಾಗಿ ನಮ್ಮಲ್ಲಿರುವ ದುರ್ಗಣಗಳನ್ನು ಜಯಿಸಬೇಕು ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್ ನಾಯಕ್ ಹೇಳಿದರು.









