ಜಿಎಸ್‌ಟಿ ಇಳಿಕೆ ಚುನಾವಣಾ ಗಿಮಿಕ್: ಮಂಜುನಾಥ ಭಂಡಾರಿ

ಜಿಎಸ್‌ಟಿ ಇಳಿಕೆ ಚುನಾವಣಾ ಗಿಮಿಕ್: ಮಂಜುನಾಥ ಭಂಡಾರಿ


ಮಂಗಳೂರು: ಕಳೆದ 8 ವರ್ಷಗಳಲ್ಲಿ ಜಿಎಸ್‌ಟಿ ಹೆಸರಿನಲ್ಲಿ ಬಿಜೆಪಿ ಕೊಳ್ಳೆ ಹೊಡೆದ ಹಣವನ್ನು ಏನು ಮಾಡುತ್ತದೆ. ಜಿಎಸ್‌ಟಿ ವಿರುದ್ಧ ರಾಹುಲ್ ಗಾಂಧಿಯವರು ಧ್ವನಿ ಎತ್ತುತ್ತಾ ಬಂದಿದ್ದರು. ಇದೀಗ ಆ ಮಾತು ಸತ್ಯ ಎಂದು ಬಿಜೆಪಿಯವರೇ ಒಪ್ಪಿಕೊಂಡಂತಲ್ಲವೇ ಎಂದು ಎಂಎಲ್‌ಸಿ ಮಂಜುನಾಥ ಭಂಡಾರಿ ಪ್ರಶ್ನಿಸಿದರು.

ಅವರು ಇಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಜಿಎಸ್‌ಟಿ ಇಳಿಕೆ ಮಾಡಿರೋದು ಹಿಂದೆಯೇ ಯಾಕೆ ಆಗಲಿಲ್ಲ. ಹಾಗಾದರೆ ಅವೈಜ್ಞಾನಿಕವಾಗಿ ೮ವರ್ಷಗಳಲ್ಲಿ ಸಂಗ್ರಹಿಸಿದ ಜಿಎಸ್‌ಟಿ ಹಣ ಏನು ಮಾಡುತ್ತದೆ ಬಿಜೆಪಿ ಸರಕಾರ. ಅದರ ನಡುವೆ ಜಿಎಸ್‌ಟಿ ಇಳಿಸಿರುವುದನ್ನು ಬಿಜೆಪಿ ಸಂಭ್ರಮಿಸುತ್ತಿದೆ. ಇದು ಅತ್ಯಂತ ನಾಚಿಗೇಡಿನ ಸಂಗತಿಯಲ್ಲವೇ?. ಬಿಹಾರ ಚುನಾವಣೆ, ಮುಂದಿನ ಎರಡೂವರೆ ವರ್ಷಗಳಲ್ಲಿ ಇನ್ನಷ್ಟು ರಾಜ್ಯಗಳಲ್ಲಿ ಚುನಾವಣೆ ಬರುತ್ತದೆ. ಈ ಚುನಾವಣೆಗಳಲ್ಲಿ ಬಿಜೆಪಿಗೆ ಸೋಲಾಗಬಹುದು ಎಂಬ ಭೀತಿಯಲ್ಲಿ ಪ್ರಧಾನಿ ಮೋದಿಯವರು ಜಿಎಸ್‌ಟಿ ಇಳಿಕೆಯ ನಾಟಕವಾಡುತ್ತಿದ್ದಾರೆ. ಆದ್ದರಿಂದ ಇದೊಂದು ಚುನಾವಣಾ ಗಿಮಿಕ್ ಎಂದು ಲೇವಡಿ ಮಾಡಿದರು.

ತೆರಿಗೆ ಏರಿಸಿದಾಗ ಅಭಿಯಾನ ಮಾಡುವುದನ್ನು ಸರಿ. ಆದರೆ ಜಿಎಸ್‌ಟಿ ಇಳಿಸಿದ ಮೇಲೆ ಅಭಿಯಾನ ಏತಕ್ಕೆ?. ತೆರಿಗೆ ಏರಿಸುವುದೂ ಬಿಜೆಪಿ, ಇಳಿಸುವುದೂ ಬಿಜೆಪಿ ಅದರ ಮೇಲೆ ನಾಟಕವಾಡುವುದೂ ಅವರೇ?. ಆದ್ದರಿಂದ ಜಿಎಸ್‌ಟಿ ಅಭಿಯಾನದ ಬದಲು ಬಿಜೆಪಿ ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ಹೇಳಿದರು.

ಮೇಕ್ ಇನ್ ಇಂಡಿಯಾ ಎಂದು ಬೊಬ್ಬೆ ಹೊಡೆದರಲ್ಲಾ ಹಾಗಾದರೆ ಎಷ್ಟು ಕಂಪೆನಿಗಳು ಮೇಕ್ ಇನ್ ಇಂಡಿಯಾ ಉತ್ಪಾದನೆ ಮಾಡಿದೆ. ಇಂದು ಯಾವುದೇ ಕಾರು ಉತ್ಪಾದನೆಗಳಲ್ಲಿ ಸುಮಾರು 30% ಚೀನಾವನ್ನು ಅವಲಂಬಿಸುತ್ತಿದ್ದೇವೆ. ಇಲೆಕ್ಟ್ರಾನಿಕ್ ವಸ್ತುಗಳು ಸುಮಾರು 80% ಚೀನಾದಿಂದ ಆಮದಾಗುತ್ತಿದೆ. ಔಷಧಿಗಳಿಗೆ ಬೇಕಾದ ಕಚ್ಚಾ ವಸ್ತುಗಳಿಗೆ 90% ಚೀನಾವನ್ನು ಅವಲಂಬಿಸುತ್ತಿದ್ದೇವೆ. ಆದ್ದರಿಂದ ಇದು ಮೇಕ್ ಇನ್ ಇಂಡಿಯಾ ಅಲ್ಲ ಮೇಕ್ ಇನ್ ಚೈನಾ. ಇಷ್ಟು ವರ್ಷ ಇದ್ದು ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಹೇಳುವ ಬಿಜೆಪಿ ಕಳೆದ 12 ವರ್ಷಗಳಲ್ಲಿ ಏನು ಮಾಡಿದೆ ಎಂದು ಲೇವಡಿ ಮಾಡಿದರು.

ನನ್ನ ಕಾಲೇಜಿನ ಹಾಸ್ಟೆಲ್‌ಗಾಗಿ ಜಿಎಸ್‌ಟಿಯಡಿ 2 ಕೋಟಿ ರೂ. ಪಾವತಿಸಲಾಗಿದೆ. ಈಗ ಅದನ್ನು ಕೇಂದ್ರ ಸರಕಾರ ನಮಗೆ ಮರು ಪಾವತಿಸಲಿದೆಯೇ ಎಂದು ಪ್ರಶ್ನಿಸಿದ ಅವರು, ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ನಡೆಸಲಾಗುವ ಇಲೆಕ್ಟ್ರಾನಿಕ್ಸ್ ಸೇರಿದಂತೆ ಇತರ ಕಂಪನಿಗಳು ಶೇ. ೮೦ರಷ್ಟು ಕಚ್ಚಾ ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿವೆ. ಹಾಗಾದರೆ 12 ವರ್ಷಗಳಲ್ಲಿ ಮೇಕ್ ಇನ್ ಇಂಡಿಯಾದಡಿ ಮಾಡಿದ್ದು ಏನು ಎಂಬ ಬಗ್ಗೆ ಉತ್ತರ ಸಿಗಬೇಕಾಗಿದೆ ಎಂದರು.

ಜಿಎಸ್‌ಟಿ ಇಳಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರದ ತೆರಿಗೆ ಎಂದು ಜಿಎಸ್‌ಟಿಯ ಇಳಿಕೆ ಬಗ್ಗೆ ಬಿಜೆಪಿಯ ಅಂಧ ಭಕ್ತರು ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೇ ನಾವು ವಾಟ್ಸಾಪ್ ಯುನಿವರ್ಸಿಟಿಯ ಅಂಧಭಕ್ತರು ಎನ್ನುವುದು. 2017ರಲ್ಲಿ ಯಾರ ಸರಕಾರ ಜಿಎಸ್‌ಟಿ ಜಾರಿಗೆ ತಂದಿದ್ದು ಎಂಬುದೇ ಅವರಿಗೆ ಅರಿವಿಲ್ಲ ಎಂದವರು ಹೇಳಿದರು.

ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸೇವಾದರ ಏರಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಟ್ಯಾಗ್ ಮಾಡಿ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಈ ಸೇವಾದರ ಏರಿಕೆಗೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಆಡಳಿತ ಮಂಡಳಿ 14 ವರ್ಷಗಳ ಬಳಿಕ ಹೆಚ್ಚಳ ಮಾಡಿರುವುದಾಗಿ ಹೇಳಿದೆ. ಮತಗಳ್ಳತನದ ಕಾಂಗ್ರೆಸ್ ಅಭಿಯಾನದ ಬಗ್ಗೆಯೂ ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗ ಕಾಂಗ್ರೆಸ್‌ನಿಂದ ದಾಖಲೆ ಕೇಳುತ್ತದೆ. ಆದರೆ ಬಿಜೆಪಿಯ ಜನಪ್ರತಿನಿಧಿಯೇ ಈ ಬಗ್ಗೆ ಆರೋಪ ಮಾಡಿರುವಾಗ ಅವರಿಂದ ದಾಖಲೆ ಕೇಳುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾಯತ್ತ ಸಂಸ್ಥೆಗಳನ್ನು ತಮ್ಮ ಅಧೀನದಲ್ಲಿರಿಸಿ ಆಡಳಿತ ನಡೆಸುವ ಬಿಜೆಪಿಯ ಕುರಿತಂತೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ಅಪ್ರಚಾಚರಗಳ ಬಗ್ಗೆ ಗಮನ ಹರಿಸಬೇಕು. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಹಿಳಾ ಘಟಕದ ನಗರ ವಿಭಾಗದ ಅಧ್ಯಕ್ಷೆ ಅಪ್ಪಿ, ಮುಖಂಡರಾದ ಸುಭಾಷ್ ಕೊಲ್ನಾಡ್, ಶಾಹುಲ್ ಹಮೀದ್, ಸುಹಾನ್ ಆಳ್ವ, ಎಂ.ಎಸ್. ಮುಹಮ್ಮದ್, ನವಾಝ್, ಚಿತ್ತರಂಜನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article