ಎಕ್ಸ್‌ಪರ್ಟ್‌ನಲ್ಲಿ ಓಣಂ ಆಚರಣೆ
Sunday, September 14, 2025
ಮಂಗಳೂರು: ‘ಸುಗ್ಗಿಹಬ್ಬ’ ಎಂದು ಕರೆಯಲ್ಪಡುವ, ಸಮಾನತೆ, ಸಂತೋಷ ಮತ್ತು ಐಕ್ಯತೆಗೆ ಪ್ರತೀಕವಾದ ಓಣಂ ಆಚರಣೆಯನ್ನು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್‌ಬೈಲ್ ಮಂಗಳೂರು ಇಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಓಣಂ ಆಚರಣೆಯ ಪ್ರಯುಕ್ತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವರ್ಣರಂಜಿತ ಪೂಕಳಂ ಅನ್ನು ರಚಿಸಿದರು. ಕೇರಳದ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿಬಂದ ಉಪನ್ಯಾಸಕರು ಪೂಕಳಂನ ಸುತ್ತತಿರುವಾದಿರ ನೃತ್ಯವನ್ನು ಮಾಡಿದ್ದು, ಇದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗುತಂದಿತು.
ಈ ಸಂದರ್ಭದಲ್ಲಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.


.jpeg)