ಪ್ರಚಾರ ಉಸ್ತುವಾರಿಯಾಗಿ ಸವಾದ್ ಸುಳ್ಯ ಆಯ್ಕೆ
Sunday, September 14, 2025
ಮಂಗಳೂರು: ಪ್ರತಿಷ್ಠಿತ ದೆಹಲಿ ವಿಶ್ವವಿದ್ಯಾಲನಿಲಯದ ವಿದ್ಯಾರ್ಥಿ ಸಂಘದ ಚುನಾವಣೆ ತಂಡಕ್ಕೆ ಕರ್ನಾಟಕದಿಂದ ಎನ್‌ಎಸ್‌ಯುಐ ಪ್ರತಿನಿಧಿಯಾಗಿ ಸವಾದ್ ಸುಳ್ಯ ಅವರು ರಾಜ್ಯ ಅಧ್ಯಕ್ಷ ಕೀರ್ತಿ ಗಣೇಶ್, ರಾಷ್ಟ್ರೀಯ ಕಾರ್ಯದರ್ಶಿ ಫಹಾದ್ ಅವರೊಂದಿಗೆ ಭಾಗವಹಿಸುತ್ತಿದ್ದಾರೆ.
ಸೆಪ್ಟೆಂಬರ್ 14 ರಿಂದ 18 ರವರೆಗೆ ದೆಹಲಿ ವಿಶ್ವವಿದ್ಯಾನಿಲಯದ ಕಾಲೇಜುಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದು, ಎನ್‌ಎಸ್‌ಯುಐ ರಾಷ್ಟ್ರೀಯ ಸಂಯೋಜಕ ಸವಾದ್ ಸುಳ್ಯ ಅವರೊಂದಿಗೆ ಎನ್‌ಎಸ್‌ಯುಐ ಉಳ್ಳಾಲ ವಿಧಾನಸಭಾ ಅಧ್ಯಕ್ಷ ಸಾಹಿಲ್ ಮಂಚಿಲ ಹಾಗೂ ಪ್ರಧಾನ ಕಾರ್ಯದರ್ಶಿ ಯು.ಟಿ. ಫರೀದ್ ಅವರು ಭಾಗವಹಿಸುತ್ತಿದ್ದಾರೆ.