ಮೂಡುಬಿದಿರೆ ಜೇಸಿ ಸಪ್ತಾಹ: ದಂತ ತಪಾಸಣಾ ಶಿಬಿರ
ಡಾ. ಪರ್ವೀನ್ ಜಾವೇದ್ ಶೇಖ್ ಮತ್ತು ತಂಡದವರು ರೋಗಿಗಳಿಗೆ ಉಚಿತ ತಪಾಸಣೆ, ಸಮಾಲೋಚನೆ ನೀಡಿ, ದಂತ ಚಿಕಿತ್ಸಾ ಕಿಟ್ ವಿತರಿಸಿದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಜೇಸಿಐ ಅಧ್ಯಕ್ಷೆ ವರ್ಷಾ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದಂತ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಬಹುಮುಖ್ಯ. ಆರೋಗ್ಯಕರ ಜೀವನಪದ್ಧತಿಗೋಸ್ಕರ ಹಲವು ಕಾರ್ಯಕ್ರಮಗಳನ್ನು ಜೇಸಿ ಸಪ್ತಾಹದಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.
ಕಾರ್ಯದರ್ಶಿ ಶ್ರವಣ್ ಕುಮಾರ್, ಪೂರ್ವ ಅಧ್ಯಕ್ಷರಾದ ಜೆಸಿ ಸಂತೋಷ್ ಕುಮಾರ್, ಸುನಿಲ್ ಕುಮಾರ್, ಶಾಂತಲಾ ಆಚಾರ್ಯ, ಸದಸ್ಯರಾದ ಮಲ್ಲಿಕಾ ಸುನಿಲ್, ಉಮೇಶ್ ಭಟ್, ಯೋಜನಾ ನಿರ್ದೇಶಕ ಫರಾಜ್, ಮತ್ತು ಉದ್ಯಮಿ ದಿನೇಶ್ ಕಾಮತ್ ಉಪಸ್ಥಿತರಿದ್ದರು.
ವೃತ್ತಿ ಮಾರ್ಗದರ್ಶನ: ಜೇಸಿ ಸಪ್ತಾಹದ ಅಂಗವಾಗಿ ಶ್ರೀ ಮಹಾವೀರ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ನ್ಯೂ ವೈಬ್ರೆಂಟ್ ಪಿ.ಯು. ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಹರೀಶ್ ನಂಬಿಯಾರ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಜೇಸಿಐ ಅಧ್ಯಕ್ಷೆ ವರ್ಷಾ ಕಾಮತ್, ಪ್ರಾಂಶುಪಾಲ ರಾಧಾಕೃಷ್ಣ ಇದ್ದರು.