ಶಿಕ್ಷಣ ಕ್ಷೇತ್ರದ ಏಳಿಗೆಯಲ್ಲಿ ರಾಜ್ಯ ಸರಕಾರ ಸೋತಿದೆ: ಎಸ್. ಎಲ್. ಭೋಜೆಗೌಡ

ಶಿಕ್ಷಣ ಕ್ಷೇತ್ರದ ಏಳಿಗೆಯಲ್ಲಿ ರಾಜ್ಯ ಸರಕಾರ ಸೋತಿದೆ: ಎಸ್. ಎಲ್. ಭೋಜೆಗೌಡ


ಮೂಡುಬಿದಿರೆ: ರಾಜ್ಯ ಸರಕಾರವು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಮಾಡದೇ, ಪ್ರಗತಿಯತ್ತ ಸಾಗುತ್ತಿದ್ದೇವೆ ಎನ್ನುವ ಕಲ್ಪನೆ ತಪ್ಪು. ಎರಡೂ ಕ್ಷೇತ್ರಕ್ಕೆ ಬೇಕಾದ ಸೌಲಭ್ಯಗಳನ್ನು ನೀಡುವುದು ಸರ್ಕಾರ ಆಧ್ಯ ಕರ್ತವ್ಯ. ಶಿಕ್ಷಣ ಕ್ಷೇತ್ರದ ಏಳಿಗೆಯನ್ನು ಮಾಡುವಲ್ಲಿ ಇಂದು ಸರ್ಕಾರ ಸೋತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೆಗೌಡ ಹೇಳಿದರು. 


ದ.ಕ ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಚಾರ್ಯರ ಸಂಘ, ದ.ಕ ಪದವಿಪೂರ್ವ ಅನುದಾನಿತ ನೌಕರರ ಸಂಘ ವಿವಿಧ ವಿಷಯವಾರು ಉಪನ್ಯಾಸಕ ಸಂಘ , ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಹಾಗೂ ಮೂಡುಬಿದಿರೆ ಎಕ್ಸಲೆಂಟ್ ಪಿಯು ಕಾಲೇಜು ಮೂಡುಬಿದಿರೆ ಆಶ್ರಯದಲ್ಲಿ ಎಕ್ಸಲೆಂಟ್ ಕ್ಯಾಂಪಸ್‌ನ ರಾಜ ಸಭಾಂಗಣದಲ್ಲಿ ಭಾನುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಸರ್ಕಾರ ಮಾಡಬೇಕಾದ ಕೆಲಸವನ್ನು ಇಂದು ಖಾಸಗಿ ಸಂಸ್ಥೆಗಳು ಮಾಡುತ್ತಿದೆ. ಸಂಸ್ಥೆಗಳ ಶ್ರಮವನ್ನು ಸರ್ಕಾರ ಅರಿಯಬೇಕು. ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುವಂತೆ ಮುಖ್ಯಮಂತ್ರಿ, ಶಿಕ್ಷಣ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.

ಶಾಸಕ ಉಮಾನಾಥ ಎ.ಕೋಟ್ಯಾನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಅಂಕ ಪಡೆಯುವುದರ ಜೊತೆಗೆ ವಿದ್ಯಾರ್ಥಿಗಳನ್ನು ಸಮರ್ಪಕವಾಗಿ ಸಮಾಜಕ್ಕೆ ನೀಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳಿಗಿದೆ. ಬದುಕುವ ವಿದ್ಯೆಯನ್ನು ಶಾಲಾ-ಕಾಲೇಜುಗಳಲ್ಲಿ ಕಲಿಸಿಕೊಡಬೇಕು. ವಿದ್ಯಾರ್ಥಿಗಳು ಮಾದಕ ವಸ್ತುಗಳ ಚಟಗಳಿಂದ ದೂರವಿರಬೇಕು. ಉತ್ತಮ ಶಿಕ್ಷಣ ಪಡೆಯುವುದು ಮಾತ್ರವಲ್ಲ, ಗುರುಹಿರಿಯರನ್ನು ಗೌರವಿಸುವ ಗುಣವನ್ನು ಯುವಜನತೆ ಬೆಳೆಸಿಕೊಳ್ಳಬೇಕು ಎಂದರು. 

ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಅಂತಾರಾಷ್ಟ್ರೀಯ ಕೇಶ ವಿನ್ಯಾಸಕರ ಶಿವರಾಮ ಕೃಷ್ಣ ಭಂಡಾರಿ, ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ ಎ.ಎಚ್, ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಡಾ.ಹರೀಶ್ ಎನ್., ಶಾಲಾ ಶಿಕ್ಷಣ ಇಲಾಖೆ( ಪದವಿಪೂರ್ವ) ದ.ಕ ಜಿಲ್ಲೆ ಉಪನಿರ್ದೇಶಕಿ ರಾಜೇಶ್ವರಿ ಎಚ್.ಎಚ್, ಸಹಾಯಕ ನಿರ್ದೇಶಕ ಆನಂದ ಪಿ., ಶಾಲಾ ಶಿಕ್ಷಣ ಇಲಾಖೆ ದ.ಕ ಶಾಖಾಧಿಕಾರಿ ನಿತಿನ್ ಬಿ.ಟಿ, ಮಾರ್ಕ್ ಮೆಂಡೋನ್ಸ ಮುಖ್ಯ ಅತಿಥಿಯಾಗಿದ್ದರು. 

ಸಂಘದ ಪರವಾಗಿ ಭೋಜೆಗೌಡ, ಉಮಾನಾಥ ಕೋಟ್ಯಾನ್, ಯುವರಾಜ್ ಜೈನ್ ಹಾಗೂ ಪ್ರದೀಪ್ ಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು. 

ದ.ಕ ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ ಜಯಾನಂದ ಎನ್.ಸುವರ್ಣ, ದ.ಕ ಪ.ಪೂ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ್ ನಾಯಕ್, ಎಕ್ಸಲೆಂಟ್ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. 

ಉಮೇಶ್ ಕೆ.ಆರ್ ಹಾಗೂ ದಿನಕರ್ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article