ನಾಳೆಯಿಂದ ಪುಸ್ತಕ ಪ್ರದರ್ಶನ, ಮಾರಾಟ ಮೇಳ

ನಾಳೆಯಿಂದ ಪುಸ್ತಕ ಪ್ರದರ್ಶನ, ಮಾರಾಟ ಮೇಳ

ಮಂಗಳೂರು: ಮಿಲಾಗ್ರಿಸ್ ಕಾಲೇಜು ಮಂಗಳೂರು ಹಾಗೂ ಯೂಸ್ಟ್ ಬುಕ್ಸ್ ಆರ್ ಸಂಯುಕ್ತ ಆಶ್ರಯದಲ್ಲಿ ಒಂದು ವಾರಗಳ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ ‘ಮಿಲಾಗ್ರಿಸ್ ಬುಕ್ ಕ್ವೆಸ್ಟ್’ ಸೆ.16 ರಿಂದ 21ರವರೆಗೆ ನಗರದ ಹಂಪನಕಟ್ಟೆ ಮಿಲಾಗ್ರಿಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ಸೆ. 16ರಂದು ಬೆಳಗ್ಗೆ 9.30ಕ್ಕೆ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಉದ್ಘಾಟನೆಗೊಳ್ಳಲಿದೆ. ಮಿಲಾಗ್ರಿಸ್ ಸಂಸ್ಥೆಗಳ ಸಂಚಾಲಕ ರೆ. ಫಾದರ್ ಬೊನವೆಂಚರ್ ನಝೆರತ್ ಅಧ್ಯಕ್ಷತೆ ವಹಿಸುವರು. ಮ್ಯಾನೇಜ್‌ಮೆಂಟ್ ಸದಸ್ಯ ಆಲ್ವಿನ್ ರೊಸಾರಿಯೊ ಅತಿಥಿಯಾಗಿ ಭಾಗವವಹಿಸುವರು. ‘ಮಿಲಾಗ್ರಿಸ್ ಬುಕ್ ಕ್ವೆಸ್ಟ್’ನಲ್ಲಿ 3000 ಸಾವಿರಕ್ಕಿಂತಲೂ ಅಧಿಕ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟವನ್ನು ಆಯೋಜಿಸಲಾಗಿದೆ. ಮಂಗಳೂರು ನಗರದ ವಿವಿಧ ಶಾಲಾ-ಕಾಲೇಜುಗಳು, ಪುಸ್ತಕ ಪ್ರೇಮಿಗಳು ಈ ಪುಸ್ತಕ ಪ್ರದರ್ಶನ ಹಾಗೂ ಮಾರಾಟದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲ ರೆ. ಡಾ. ಆಲ್ವಿನ್ ಸೆರಾವೊ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಮಿಳುನಾಡಿನ ಕೊಯಂಬತ್ತೂರಿನ ತರುಣ್ ತೇಜಸ್ ಗಂಗಮ್ ಮತ್ತು ತಕ್ಷಿಣಿ ಅಶೋಕ್ ಕುಮಾರ್ ಇವರಿಂದ ಸ್ಥಾಪಿಸಲ್ಪಟ್ಟ ಯೂಸ್ಡ್ ಬುಕ್ ಆರ್ ಎಂಬ ಸಂಸ್ಥೆ ದೇಶದಾದ್ಯಂತ ಪುಸ್ತಕ ಮಾರಾಟಕ್ಕೆ ಪ್ರಸಿದ್ಧಿ ಪಡೆದಿದೆ. ಜನರಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಡಿಮೆ ದರದಲ್ಲಿ ಪುಸ್ತಕಗಳನ್ನು ಮಾರಾಟ ನಡೆಸಲಾಗುತ್ತಿದೆ. ಪ್ರದರ್ಶನ ಮಳಿಗೆಯಲ್ಲಿ ಪುಸ್ತಕಗಳನ್ನು ಕಿಲೋ ದರದಲ್ಲಿ ಹೊಸ ಪುಸ್ತಕಗಳ ಮಾರಾಟ ಮಾಡುವ ವ್ಯವಸ್ಥೆ ಇದೆ ಎಂದರು.

ಉಪನ್ಯಾಸಕರಾದ ಮಮತಾ ಶೆಟ್ಟಿ, ಡೆನ್ಸಿಲ್ ಡಿಕೋಸ್ಟ, ಗ್ರಂಥಪಾಲಕಿ ಪ್ರಮೀಳಾ ಡಿಸೋಜ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article