ಗೋ ಕಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ

ಗೋ ಕಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ


ಮಂಗಳೂರು: ಗೋ ಕಳ್ಳತನದ ಪ್ರಕರಣ ಬೇಧಿಸಿದ ಕಂಕನಾಡಿ ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಸೆ.17ರಂದು ನಡೆದಿದೆ.

ಅಡ್ಯಾರ್ ನಿವಾಸಿಗಳಾದ ಶಾಬಾಜ್ ಅಹಮ್ಮದ್, ವಳಚ್ಚಿಲ್ ಖಾದರ್ ಮೊಹಮ್ಮದ್ ಹಾಗೂ ಅರ್ಕುಳ-ವಳಚ್ಚಿಲ್ ನಿವಾಸಿ ಮೊಹಮ್ಮದ್ ಸುಹಾನ್ ಬಂಧಿತರು.

ಪ್ರಕರಣದ ಹಿನ್ನೆಲೆ:

ಮಂಗಳೂರು ನಗರದ ಅಡ್ಯಾರ್‌ನ ತಜಿಪೋಡಿ ಎಂಬಲ್ಲಿ ಸೆ.13 ರಂದು ಬೆಳಗ್ಗೆ ಉಮೇಶ್ ಆಳ್ವ ಎಂಬವರ ಮನೆಯ ಅಂಗಳದಿಂದ ಕ್ರಾಸ್ ಜರ್ಸಿ ಹಸುವನ್ನು ಕಳ್ಳತನ ಮಾಡಿದ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  

ಪೊಲೀಸರು ತಕ್ಷಣ ಕಾರ್ಯಚರಣೆ ನಡೆಸಿ ಕಳುವಾದ ಹಸುವನ್ನು ಜೀವಂತವಾಗಿ ಪತ್ತೆಹಚ್ಚಿ, ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರು ನೀಡಿದ ಪ್ರಕಾರ, ಶಾಬಾಜ್ ಮತ್ತು ಸುಹಾನ್ ದನವನ್ನು ಕಳ್ಳತನ ಮಾಡಿ, ಅದನ್ನು ಖಾದರ್ ಮೊಹಮ್ಮದ್‌ಗೆ ಮಾರಾಟ ಮಾಡಿದ್ದರು. ಖಾದರ್, ದನವನ್ನು ಮಾಂಸ ಮಾಡಲು ಖರೀದಿಸಿದ್ದ ಎನ್ನಲಾಗಿದೆ. ಪೊಲೀಸರು ದನವನ್ನು ರಕ್ಷಿಸಿ ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article