ಪದವಿ ಕಾಲೇಜುಗಳ ಗಣಿತಶಾಸ್ತ್ರ ಅಧ್ಯಾಪಕರುಗಳ ಸಂಘದ ಸಭೆ ಸಂಪನ್ನ
Sunday, September 28, 2025
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಗಣಿತಶಾಸ್ತ್ರ ಅಧ್ಯಾಪಕರುಗಳ ಸಂಘದ (ಫಾರ್ಮಾಟ್) ಸಭೆ ಇತ್ತೀಚೆಗೆ ನಗರದ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಬಲ್ಮಠ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಸವಿತಾ, ಕಾರ್ಯದರ್ಶಿಯಾಗಿ ಉಡುಪಿಯ ಅಜ್ಜರ ಕಾಡು ಪದವಿ ಕಾಲೇಜಿನ ಡಾ. ಶ್ರೀಮತಿ ಅಡಿಗ, ಖಜಾಂಚಿಯಾಗಿ ಮಂಗಳೂರಿನ ಕೆನರಾ ಕಾಲೇಜಿನ ಕೀರ್ತಿ ಅವರು ಆಯ್ಕೆಯಾದರು.
ಸಂಘದ ವತಿಯಿಂದ ನಿವೃತ್ತ ಗಣಿತ ಉಪನ್ಯಾಸಕುಗಳಾದ ಸರಸ್ವತಿ ಟಿ. ಹಾಗೂ ಜೆಫ್ರಿ ರೋಡ್ರಿಗಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.