ಅ.1,2 ಬನ್ನಡ್ಕದಲ್ಲಿ 4ನೇ ವರ್ಷದ ಶಾರದೋತ್ಸವ: ಡಾ. ಎಂ. ಮೋಹನ ಆಳ್ವರಿಗೆ "ಬನ್ನಡ್ಕ ಶ್ರೀ ಶಾರದಾರತ್ನ" ಪ್ರಶಸ್ತಿ ಪ್ರದಾನ
ಅವರು ಶನಿವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವೇ.ಮೂ ಎಂ.ಆರ್ ಅನಂತ ಪದ್ಮನಾಭ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಅ.1ರಂದು ಗಣಹೋಮ, ಮೂಡುಬಿದಿರೆ ಕನ್ನಡ ಭವನದಿಂದ ನಗರ ಮಾರ್ಗವಾಗಿ ಶ್ರೀಕ್ಷೇತ್ರ ಬನ್ನಡ್ಕಕ್ಕೆ ಮೆರವಣಿಗೆ ಮೂಲಕ ಶ್ರೀಶಾರದಾ ಮಾತೆಯನ್ನು ಬರಮಾಡಿಕೊಳ್ಳಲಾಗುವುದು, ಬೆಳಗ್ಗೆ 9.30ಕ್ಕೆ ಶಾರದಾಂಬೆಯ ಪ್ರತಿಷ್ಠಾಪನೆ, ಧ್ವಜಾರೋಹಣ, ಧಾರ್ಮಿಕ ಸಭೆ, ಭಜನಾ ಸಂಗೀರ್ತನೆ, ದುರ್ಗಾ ಹೋಮ, ಮಹಾಪೂಜೆ, ಮುದ್ದುಶಾರದೆ ಸ್ಪರ್ಧೆ, ಮೆಹಂದಿ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಉದ್ಯಮಿ ರಾಜೇಂದ್ರ ಜೈನ್ ಪ್ರತಿಷ್ಠಾಪನೆ ಮಾಡಲಿದ್ದಾರೆ. ಎಸ್‌ಕೆಎಫ್ ಎಲಿಕ್ಸರ್ ಆಡಳಿತ ನಿರ್ದೇಶಕ ರಾಮಕೃಷ್ಣ ಆಚಾರ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾರದೋತ್ಸವ ಸಮಿತಿಯ ಅಧ್ಯಕ್ಷ ದಯಾನಂದ ಪೈ, ಬನ್ನಡ್ಕ ಕ್ಷೇತ್ರದ ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಳ್, ಮಾರ್ನಾಡು ಹೊಯಿಪಾಲಬೆಟ್ಟದ ಆಡಳಿತ ಮೊಕ್ತೇಸರ ರಾಜೇಶ್ ಬಲ್ಲಾಳ್, ಚೌಟರ ಅರಮನೆಯ ಕುಲದೀಪ ಎಂ., ಸಂಸದ ಕ್ಯಾ.ಬ್ರಿಜೇಶ್ ಚೌಟ, ಉದ್ಯಮಿ ಸುದರ್ಶನ್ ಎಂ. ಸಹಿತ ಗಣ್ಯರು ಉಪಸ್ಥಿತರಿರುವರು. ರಾತ್ರಿ 8 ಗಂಟೆಯಿಂದ ಕಾಪು ರಂಗತರಂಗ ಕಲಾವಿದರಿಂದ ಕುಟ್ಯಣ್ಣನ ಕುಟುಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಅ.2ರಂದು ಬೆಳಗ್ಗೆ 8.30ರಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. 11 ಗಂಟೆಗೆ ಧಾರ್ಮಿಕ ಸಭೆ ಬಹುಮಾನ ವಿತರಣೆ ನಡೆಯಲಿದೆ. ಟ್ರಸ್ಟ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀವರ್ಚನ ನೀಡಲಿರುವರು. ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಂಸದ ನಳಿಕು ಕುಮಾರ್ ಕಟೀಲ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಎಸ್‌ಸಿಡಿಸಿಸಿ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಸಹಿತ ಗಣ್ಯರು ಉಪಸ್ಥಿತರಿರುವರು.
ಸಾಯಂಕಾಲ 5 ಗಂಟೆಗೆ ಮಹಾಪೂಜೆ, ವಿಸರ್ಜನಾ ಪೂಜೆ ನಡೆಯಲಿದ್ದು, ಸಾಯಂಕಾಲ 6 ಗಂಟೆಗೆ ವೈಭವದ ಶೋಭಾಯಾತ್ರೆ ನಡೆಯಲಿದೆ. ಶ್ರೀ ದಏವಿಯ ವಿಗ್ರಹವನ್ನು ಶ್ರೀಕ್ಷೇತ್ರ ಬನ್ನಡ್ಕದಿಂದ ಹೊರಟು ಅಲಂಗಾರು ಶ್ರೀ ಬಡಗು ಮಹಾಗಣಪತಿ ಮಾಹಲಿಂಗೇಶ್ವರ ದೇವರ ಮಾನಸ ಗಂಗೋತ್ರಿ ಸರೋವರದಲ್ಲಿ ಜಲಸ್ತಂಭನಗೊಳಿಸಲಾಗುವುದು ಎಂದು ದಯಾನಂದ ಪೈ ತಿಳಿಸಿದರು.
ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡು ಮಾತನಾಡಿ ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದೊಂದಿಗೆ ಸಮಿತಿಯ ವತಿಯಿಂದ ಪ್ರೋತ್ಸಾಹ ಧನ ನೀಡಲಾಗುವುದು. ಸಾವ೯ಜನಿಕರಿಗೆ ಸಾಂಸ್ಕೃತಿಕ ಸ್ಪಧೆ೯ಗಳು, ಹೂ ಕಟ್ಟುವ ಸ್ಪಧೆ೯ಗಳು ನಡೆಯಲಿವೆ ಎಂದು ತಿಳಿಸಿದರು.
ಕಾರ್ಯದರ್ಶಿ ಸುಧಾಕರ್ ಆಚಾರ್ಯ, ಜೊತೆ ಕಾರ್ಯದರ್ಶಿ ಅಕ್ಷಯ್ ಕುಮಾರ್ ಬನ್ನಡ್ಕ ಸುದ್ದಿಗೋಷ್ಠಿಯಲ್ಲಿದ್ದರು.