ನವ ಮೈತ್ರಿ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: 20.36 ಕೋಟಿ ದುಡಿಯುವ ಬಂಡವಾಳ;51.81 ಲಕ್ಷ ಲಾಭ
2೦12ರಲ್ಲಿ ಪ್ರಾರಂಭಗೊಂಡ ನವ ಮೈತ್ರಿ ಸಹಕಾರಿಯು 13 ವರ್ಷಗಳನ್ನು ಪೂರೈಸಿ ಶಿರ್ತಾಡಿ, ನಾರಾವಿ ಮತ್ತು ಅಳದಂಗಡಿಯಲ್ಲಿ ಶಾಖೆ ಹೊಂದಿ ಸದಸ್ಯ ಗ್ರಾಹಕರಿಗೆ ವ್ಯವಹಾರ ನಡೆಸಲು ಅನುಕೂಲ ಕಲ್ಪಿಸಿದೆ. ಸಹಕಾರಿಯೂ 20.36 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, 17.07 ಕೋಟಿ ಸದಸ್ಯ ಠೇವಣಿ ಹೊಂದಿದೆ. ಪ್ರಸಕ್ತ ವರ್ಷದಲ್ಲಿ 51.81 ಲಕ್ಷ ಲಾಭವನ್ನು ಪಡೆದುಕೊಂಡಿದೆ. ಸಹಕಾರಿ ಸಂಘವು ಸದಸ್ಯರ ಅನುಕೂಲಕ್ಕಾಗಿ ಯುನಿಕ್ಸ್ ಮೊಬೈಲ್ ಆಪ್ ಬಿಡುಗಡೆಗೊಳಿಸಿದ್ದು,ಗ್ರಾಹಕರು ಸಂಘದಲ್ಲಿನ ವ್ಯವಹಾರವನ್ನು ತಿಳಿದುಕೊಳ್ಳಬಹುದಾಗಿದೆ. ಪ್ರಸಕ್ತ ವರ್ಷದಲ್ಲಿ ಶೇಕಡ 10 ಲಾಭಾಂಶ ನೀಡಲು ಮಹಾಸಭೆಯಲ್ಲಿ ನಿರ್ಧರಿಸಲಾಗಿದೆ. ಒಟ್ಟಾರೆಯಾಗಿ ಪ್ರಸಕ್ತ ವರ್ಷ ಇನ್ನೂರು ಕೋಟಿ ವ್ಯವಹಾರವನ್ನು ನಡೆಸಿ ಮೆಚ್ಚುಗೆ ಗಳಿಸಿದೆ. ಈ ಸ್ಟ್ಯಾಂಪಿಂಗ್, ಪಹಣಿ ಪತ್ರ ಸೇವೆ, ಯಶಸ್ವಿನಿ, ಸ್ವಸಹಾಯ ಸಂಘ ಚಟುವಟಿಕೆ ಮುಂತಾದ ಕಾರ್ಯಯೋಜನೆಗಳನ್ನು ಸಂಘವು ತನ್ನ ವ್ಯವಹಾರಗಳೊಂದಿಗೆ ನಡೆಸುತ್ತಿದೆ.
ಶಿರ್ತಾಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಮೈತ್ರಿ ಸೌಧ ಕೇಂದ್ರ ಕಚೇರಿ ಸಹಿತ ವಾಣಿಜ್ಯ ಸಂಕೀರ್ಣದ ಉದ್ಘಾಟನೆಯನ್ನು ಶೀಘ್ರದಲ್ಲೇ ನಡೆಸಲು ತೀರ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ವಿನಯ ಹೆಗ್ಡೆ, ನಿರ್ದೇಶಕರಾದ ಎಸ್ ಪ್ರವೀಣ್ ಕುಮಾರ್, ಮಹಾವೀರ ಜೈನ್, ಮಹಾವೀರ ಮುದ್ಯ, ಲ್ಯಾನ್ಸಿ ಡೇಸ, ಫ್ರಾಂಕಿ ಎಲ್ ಪಿಂಟೊ, ರಕ್ಷಿತ್ ಆರ್, ಅರುಣ್ ಎನ್ ಶೆಟ್ಟಿ, ಸದಾನಂದ ಪೂಜಾರಿ, ಬಬಿತಾ ಆರ್ ಶೆಟ್ಟಿ, ಶಾರದಾ ಸುವರ್ಣ, ರವೀಂದ್ರ ಬಿ ಅಮೀನ್ ವೇದಿಕೆಯಲ್ಲಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಜೆಕೆ ವರದಿ ಮಂಡಿಸಿ ಶಾಖಾ ವ್ಯವಸ್ಥಾಪಕ ಸತೀಶ್ ಕೆ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ವಲ್ ಯುನಿಗ್ಸ್ ಆಪ್ ಬಳಕೆ ಬಗ್ಗೆ ಮಾಹಿತಿ ನೀಡಿದರು. ಹೊನ್ನಪ್ಪ ಸ್ವಾಗತಿಸಿ ಸುಚೇತ ಆಚಾರ್ಯ ಪ್ರಾರ್ಥನೆಗೈದರು. ರಾಜವರ್ಮ ಜೈನ್ ವಂದಿಸಿದರು.