ಸೆ.29-30ರಂದು ಪೊನ್ನೆಚಾರಿ ದೇವಳದಲ್ಲಿ ಮೂಡುಬಿದಿರೆ ದಸರಾ: ಶಾರಾದಾನುಗ್ರಹ, ಸಿರಿಪುರ ಪ್ರಶಸ್ತಿ ಪ್ರದಾನ
ಸೆ.29ರಂದು ಗಣಹೋಮ, ಚಿತ್ರಕಲಾ ಸ್ಪಧೆ, ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ, ಅಕ್ಷರಾಭ್ಯಾಸ, ಭಕ್ತಿಗೀತೆ ಸ್ಪರ್ಧೆ, ರಂಗಪೂಜೆ, ಗುಂಪು ನೃತ್ಯ ಸಪರ್ಧೆ, ಭಜನೆ ನಡೆಯಲಿದೆ. ಸಾಯಂಕಾಲ ಎಂ.ಜೆ ಸ್ಟೆಪ್-ಅಪ್ ಡ್ಯಾನ್ಸ್ ಅಕಾಡೆಮಿಯಿಂದ ನೃತ್ಯ ಕಾರ್ಯಕ್ರಮ, ಕಾಪು ರಂಗತರಂಗ ಕಲಾವಿದರಿಂದ `ಕುಟ್ಯಣ್ಣನ ಕುಟುಂಬ' ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಸೆ.30ರಂದು ಶ್ರೀದೇವಿಗೆ ವಿಶೇಷ ಅಲಂಕಾರ, ಶ್ರೀ ಪಂಚದುರ್ಗಾ ಹವನ, ಏಕಪಾತ್ರಾಭಿನಯ ಸ್ಪರ್ಧೆ, ಮುದ್ದು ಶಾರದೆ ಸ್ಪರ್ಧೆ, ಅಕ್ಷರಾಭ್ಯಾಸ, ಸಾಮೂಹಿಕ ಕುಂಕುಮಾರ್ಚನೆ, ರಂಗಪೂಜೆ ಸಹಿತ ಧಾರ್ಮಿಕ, ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ವಿಸರ್ಜನಾ ಪೂಜೆ ನಡೆಯಲಿದ್ದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಮ, ಸಭಾ ಕಾರ್ಯಕ್ರಮವಿದೆ. ಈ ಸಂದರ್ಭ ಎಂಸಿಎಸ್ ಬ್ಯಾಂಕ್ ಅಧ್ಯಕ್ಷ, ವಕೀಲ ಬಾಹುಬಲಿ ಪ್ರಸಾದ್ ಅವರಿಗೆ ಶ್ರೀಶಾರದಾನುಗ್ರಹ ಪ್ರಶಸ್ತಿ 2025 ಹಾಗೂ ದಂತ ತಜ್ಞ ಡಾ.ವಿನಯ್ ಕುಮಾರ್ ಹೆಗ್ಡೆ ಅವರಿಗೆ ಸಿರಿಪುರ ಪ್ರಶಸ್ತಿ 2025 ನೀಡಿ ಗೌರವಿಸಲಾಗುವುದು. ಸ್ಪರ್ಧಾ ವಿಚೇತರಿಗೆ ಬಹುಮಾನ ವಿತರಿಸಲಾಗುವುದು. ಸಾಯಂಕಲ 6ಗಂಟಗೆ ವಿಸರ್ಜನಾ ಮೆರವಣಿಗೆ ನಡೆಯಲಿದ್ದು, ರಾತ್ರಿ 10.30ಕ್ಕೆ ದೇವಿಯ ವಿಗ್ರಹವನ್ನು ಜಲಸ್ತಂಭನಗೊಳಿಸಲಾಗುವುದು ಎಂದು ತಿಳಿಸಿದರು.
ಪುರಸಭಾ ಸದಸ್ಯ ಸುರೇಶ್ ಪ್ರಭು, ಸಿರಿಪುರ ಪ್ರತಿಷ್ಠಾನದ ಸ್ಥಾಪಕ ರಾಮಕೃಷ್ಣ ಶಿರೂರು, ಭಜಕರಾದ ಹರೇರಾಮ್ ಮಲ್ಯ ಸುದ್ದಿಗೋಷ್ಠಿಯಲ್ಲಿದ್ದರು.