ರಾಷ್ಟ್ರೀಯ ಮಟ್ಟದ ಫ್ಲೋರ್ಬಾಲ್ ಟೂರ್ನಮೆಂಟ್ನಲ್ಲಿ ವಿಕ್ರೀತಾಗೆ 3ನೇ ಸ್ಥಾನ
Friday, September 26, 2025
ಮೂಡುಬಿದಿರೆ: ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಪ್ರಥಮ ಬಿ. ಎ. ವಿದ್ಯಾರ್ಥಿನಿ ವಿಕ್ರೀತಾ ಇವರು ತ್ರಿಹುಟ್ ಕಾಲೇಜ್ ಆಫ್ ಫಿಸಿಕಲ್ ಎಜುಕ್ಯೇಶನ್, ಜಾಹ್ಘಾನ್, ಮುಜಫ್ಫರ್ಪುರ, ಬಿಹಾರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಫ್ಲೋರ್ಬಾಲ್ ಟೂರ್ನಮೆಂಟ್ನಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ.
ಇವಳು “ಅತ್ಯುತ್ತಮ ರಕ್ಷಣಾ ಆಟಗಾರ್ತಿ ಎಂಬ ಗೌರವ ಕವಚವನ್ನೂ ಪಡೆದಿದ್ದಾರೆ.
ಇವರಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ಪ್ರಾಂಶುಪಾಲರು ಹಾಗೂ ಅಧ್ಯಾಪಕ ಅಧ್ಯಾಪಕೇತರ ವೃಂದದವರು ಅಭಿನಂದಿಸಿದ್ದಾರೆ.
