ಮೂಡುಬಿದಿರೆಯಲ್ಲಿ 78ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ: ಬದುಕಲ್ಲಿ ಉತ್ತಮವಾದುದನ್ನು ಅಳವಡಿಸಿಕೊಳ್ಳುವ ಉತ್ಸವ ದಸರಾ
ಸಮಾಜ ಮಂದಿರ ಪುರಸ್ಕಾರ:
ಮೂಡುಬಿದಿರೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಉದ್ಯಮಿ, ನವಮಿ ಸಮೂಹ ಸಂಸ್ಥೆಗಳ ನಂದಕುಮಾರ್ ಆರ್.ಕುಡ್ವ ಅವರಿಗೆ 'ಸಮಾಜ ಮಂದಿರ ಪುರಸ್ಕಾರ'ವನ್ನು ನೀಡಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ನಂದ ಕುಮಾರ್ ಕುಡ್ವಾ ಪರಿಶ್ರಮದಿಂದ ಯಶಸ್ಸು ಸಾಧ್ಯವಾಗುತ್ತದೆ. ನಿಯತ್ತಿನ ದುಡಿಮೆ, ಹಿರಿಯರಿಗೆ ಗೌರವ ಗೆಲುವಿನ ಸೂತ್ರಗಳು ಎಂದರು.
ಸಮಾಜ ಮಂದಿರ ಸಭಾದ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಸಹ ಕಾಯ೯ದಶಿ೯ ಕೆ. ಆರ್. ಪಂಡಿತ್, ಆಡಳಿತ ಮಂಡಳಿಯ ಸದಸ್ಯ ಸಿ. ಹೆಚ್. ಗಫೂರ್, ರಾಮ್ ಪ್ರಸಾದ್ ಭಟ್, ಪ್ರತಾಪ್ ಕುಮಾರ್ ಜೈನ್, ಪಿ. ರಾಮ ಪ್ರಸಾದ್ ಭಟ್, . ಕೆ. ವೆಂಕಟೇಶ್ ಕಾಮತ್, ಪಿ. ಜಯರಾಜ್ ಕಂಬಳಿ, ರಾಜೇಶ್ ಕೋಟೆಗಾರ್, ಎಂ.ಎಸ್. ಕೋಟ್ಯಾನ್ ಉಪಸ್ಥಿತರಿದ್ದರು.
ದಸರಾ ಉತ್ಸವದ ಸಂಚಾಲಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಸ್ವಾಗತಿಸಿ ಕಾಯ೯ಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಹೆಚ್. ಸುರೇಶ್ ಪ್ರಭು ಸಮ್ಮಾನ ಪತ್ರ ವಾಚಿಸಿದರು. ಕಾಯ೯ದಶಿ೯ ಗಣೇಶ್ ಕಾಮತ್ ವಂದಿಸಿದರು.
ಬಳಿಕ ಸಂತೋಷ್ ಕುಮಾರ್ ಮತ್ತು ಬಳಗದ ‘ ಸವಿಗಾನ ಮೆಲೋಡಿಸ್’ ಅವರಿಂದ ಸಂಗೀತ ರಸಮಂಜರಿ ನಡೆಯಿತು.


