ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ ಆಚರಣೆ: ಪೌಷ್ಟಿಕಾಂಶವುಳ್ಳ ಆಹಾರ ಪದಾಥ೯ಗಳನ್ನು ಸೇವಿಸಿ: ಡಾ. ಅಚ೯ನಾ ಪ್ರಭಾತ್ ಸಲಹೆ

ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ ಆಚರಣೆ: ಪೌಷ್ಟಿಕಾಂಶವುಳ್ಳ ಆಹಾರ ಪದಾಥ೯ಗಳನ್ನು ಸೇವಿಸಿ: ಡಾ. ಅಚ೯ನಾ ಪ್ರಭಾತ್ ಸಲಹೆ


ಮೂಡುಬಿದಿರೆ: ನಾವು ಆರೋಗ್ಯವಂತರಾಗಲು ಉತ್ತಮ ಆಹಾರ ಪದಾಥ೯ಗಳನ್ನು ಸೇವಿಸಬೇಕು.  ದೇಹಕ್ಕೆ ಬೇಕಾಗುವ ಪೌಷ್ಠಿಕಾಂಶವುಳ್ಳ ಗೆಡ್ಡೆ ಗೆಣಸು, ಸೊಪ್ಪು ತರಕಾರಿಗಳನ್ನು   ಸೇವಿಸುವುದರಿಂದ  ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಸಾಧ್ಯವಿದೆ ಎಂದು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಉಪನ್ಯಾಸಕಿ ಡಾ.ಅರ್ಚನಾ ಪ್ರಭಾತ್ ಹೇಳಿದರು.
ಅವರು ರಾಷ್ಟ್ರೀಯ ಸಮುದಾಯ ಆಧಾರಿತ ಕಾರ್ಯಕ್ರಮದಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಹಾಗೂ ಆಳ್ವಾಸ್ ಸ್ನಾತಕೋತ್ತರ ವಿಭಾಗದ ಆಹಾರ ವಿಜ್ಞಾನ, ಮತ್ತು ಕಲ್ಲಬೆಟ್ಟು ಅಂಗನವಾಡಿ ಕೇಂದ್ರದ ವತಿಯಿಂದ  ಕಲ್ಲಬೆಟ್ಟು ಸಹಕಾರಿ ಸಂಘದ ಸಭಾಂಗಣದಲ್ಲಿ ಬುಧವಾರ ಪೌಷ್ಟಿಕಾಂಶ ಸಪ್ತಾಹ ಆಚರಣೆ ಹಾಗೂ ಮಾಹಿತಿ ಕಾಯಾ೯ಗಾರದಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. 
ಲಯನ್ಸ್ ಕ್ಲಬ್ ನ ಅಧ್ಯಕ್ಷ ಅಮಿತ್ ಡಿ'ಸಿಲ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಉಪನ್ಯಾಸಕಿ ಸುಶ್ಮಿತಾ, ತೇಜಸ್ವಿ, ಗ್ಲೆನಿಟಾ, ವಿನ್ನಿ ಕಲ್ಲಬೆಟ್ಟು ಉಪಸ್ಥಿತರಿದ್ದರು.
ಉಪೆ೯ಲ್ ಪಾದೆ ಅಂಗನವಾಡಿ ಕೇಂದ್ರದ ಕಾಯ೯ಕತೆ೯ ಜ್ಯೋತಿ ಸ್ವಾಗತಿಸಿದರು. ಕಲ್ಲಬೆಟ್ಟು ಅಂಗನವಾಡಿ ಕಾರ್ಯಕರ್ತೆ ರೇಖಾ ಕಾರ್ಯಕ್ರಮ ನಿರ್ವಹಿಸಿದರು. ಬಗ್ಗಜಾಲು ಅಂಗನವಾಡಿ ಕೇಂದ್ರದ ಸುಮತಿ ವಂದಿಸಿದರು.
ಪುರಸಭಾ ವ್ಯಾಪ್ತಿಯ 9 ಅಂಗನವಾಡಿ ಕೇಂದ್ರಗಳು ಸೇರಿ ಪೋಷಣ್ ಅಭಿಯಾನವನ್ನು ಆಯೋಜಿಸಿದ್ದವು.

ನಂತರ ಆಳ್ವಾಸ್ ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿಕೆ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article