ಕೊರಗ ಸಮುದಾಯದ ಯುವತಿಯ ಅತ್ಯಾಚಾರ: ಫೊಟೋಗ್ರಾಫರ್ ಅರೆಸ್ಟ್

ಕೊರಗ ಸಮುದಾಯದ ಯುವತಿಯ ಅತ್ಯಾಚಾರ: ಫೊಟೋಗ್ರಾಫರ್ ಅರೆಸ್ಟ್


ಮೂಡುಬಿದಿರೆ: ಕೊರಗ ಸಮುದಾಯದ ಯುವತಿಯೋವ೯ಳನ್ನು ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೊಟೋಗ್ರಾಫರ್ ಯುವಕನನ್ನು ಮೂಡುಬಿದಿರೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮೂಲತಃ ಉಪ್ಪಿನಂಗಡಿ ಬೆದ್ರೋಡಿಯ ನಿವಾಸಿ, ಇದೀಗ ಮೂಡುಬಿದಿರೆ ಸಮೀಪದ ಕರಿಂಜೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಸಂಕೇತ್ ಗಾಣಿಗ (31) ಬಂಧಿತ ಆರೋಪಿ.

ಈತ ಬ್ರಹ್ಮಾವರದ ಕೊರಗ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳೊಂದಿಗೆ ಇನ್ಸ್ಟಾಗ್ರಾಮ್ ನಲ್ಲಿ ಸ್ನೇಹ  ಬೆಳೆಸಿ ಬಳಿಕ ಆಕೆಯನ್ನು ದೈಹಿಕವಾಗಿ  ಬಳಸಿಕೊಂಡಿದ್ದಾನೆ. 

ಆಕೆ ಮದುವೆಯಾಗಲು ಆಗ್ರಹಿಸಿದಾಗ  ಜಾತಿಯ ನೆಪವೊಡ್ಡಿ  ನಿರಾಕರಿಸಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಯುವತಿ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಪ್ರಕರಣ ದಾಖಲಿಸಿ, ಸಿಬಂದಿಗಳಾದ ಮಹಮ್ಮದ್ ಹುಸೇನ್, ಅಕೀಲ್ ಮತ್ತು ನಾಗರಾಜ್ ಅವರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೈಹಿಕ ಸಂಬಂಧ ಬೆಳೆಸಿ ಬಳಿಕ ಮದುವೆಗೆ ನಿರಾಕರಿಸಿದ ಫೊಟೋಗ್ರಾಫರ್ ವಿರುದ್ಧ ದಲಿತ ದೌರ್ಜನ್ಯ ಕಾಯಿದೆ ಪ್ರಕಾರ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಬಂಧಿಸಿ ಜಿಲ್ಲಾ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article