ದಿ.ವಿಜೇತ್ ಸ್ಮರಣಾಥ೯ ನಿಮಿ೯ಸಿರುವ "ನೇತಾಜಿ ಆಶ್ರಯ" ಹಸ್ತಾಂತರ-ನೇತಾಜಿ ಬ್ರಿಗೇಡ್ ನಿಂದ ಮಾದರಿ ಕಾಯ೯: ಕೇಮಾರು ಶ್ರೀ

ದಿ.ವಿಜೇತ್ ಸ್ಮರಣಾಥ೯ ನಿಮಿ೯ಸಿರುವ "ನೇತಾಜಿ ಆಶ್ರಯ" ಹಸ್ತಾಂತರ-ನೇತಾಜಿ ಬ್ರಿಗೇಡ್ ನಿಂದ ಮಾದರಿ ಕಾಯ೯: ಕೇಮಾರು ಶ್ರೀ


ಮೂಡುಬಿದಿರೆ: ಕಳೆದ 30 ವಷ೯ಗಳಿಂದ ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಮನೆಯಲ್ಲಿ ಜೀವನ ನಡೆಸುತ್ತಿದ್ದ ವೃದ್ಧೆ ಬೇಬಿ ಅವರಿಗೆ ನೇತಾಜಿ ಬ್ರಿಗೇಡ್ ಸಂಘಟನೆಯು 6ನೇ ವಾಷಿ೯ಕೋತ್ಸವದಂಗವಾಗಿ ದಿ. ವಿಜೇಶ್ ಅವರ ಸ್ಮರಣಾಥ೯ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಲಂಗಲ್ಲುವಿನಲ್ಲಿ ರೂ. 4ಲಕ್ಷ ವಚ್ಚದಲ್ಲಿ ನಿಮಿ೯ಸಿರುವ "ನೇತಾಜಿ ಆಶ್ರಯ"ವನ್ನು ಹಸ್ತಾಂತರಿಸುವ ಕಾಯ೯ಕ್ರಮ ಭಾನುವಾರ ನಡೆಯಿತು. 


ಕೇಮಾರು ಸಾಂದೀಪನಿ ಆಶ್ರಮದ ಈಶ ವಿಠಲದಾಸ ಸ್ವಾಮೀಜಿ ಅವರು ಮನೆಯ ನಾಮಫಲಕವನ್ನು ಅನಾವರಣಗೊಳಿಸಿ, ಕೀಯನ್ನು ಹಸ್ತಾಂತರಿಸಿ ಮಾತನಾಡಿ  ಮನುಷ್ಯರಲ್ಲಿ ಮರೆಯಾಗುತ್ತಿರುವ ಮನುಷ್ಯತ್ವದ ಮಧ್ಯೆಯೂ ನೇತಾಜಿ ಬ್ರಿಗೇಡ್ ನಂತಹ ಸಂಘಟನೆ ಮನುಕುಲಕ್ಕೆ ಬೇಕಾದಂತಹ ಉತ್ತಮ ಕೆಲಸ ನ್ನು ಮಾಡುವ ಮೂಲಕ ಮಾದರಿಯಾಗಿದೆ.  ನಮ್ಮ ಮನೆ ದೊಡ್ಡದಿದ್ದರೆ ಮಾತ್ರ ಸಾಲದು ಬದಲಾಗಿ ಮನಸ್ಸು ಕೂಡಾ ದೊಡ್ಡದಾಗಿರಬೇಕು.  ಮನುಷ್ಯತ್ವಕ್ಕೆ ಪ್ರಾಮುಖ್ಯತೆ ನೀಡುವ ಸಂಸ್ಕಾರವನ್ನು ನಾವು ಮಕ್ಕಳಿಗೆ  ನೀಡಬೇಕಾಗಿದೆ ಎಂದ ಅವರು  ಆಯಸ್ಸು ಇದ್ದಷ್ಟು ದಿನ ಮಾತ್ರ ನಾವು ಈ ಭೂಮಿಯಲ್ಲಿ ಬದುಕಲು ಸಾಧ್ಯ ಆದ್ದರಿಂದ ಮಗನ ನೆನಪಲ್ಲಿ ಕಣ್ಣೀರು ಹಾಕಬೇಡಿ ಬದಲಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿರಿ ಎಂದು ವಿಜೇಶ್ ತಾಯಿಗೆ ಸಲಹೆ ನೀಡಿದರು. 


ಶಾಸಕ ಉಮಾನಾಥ ಎ. ಕೋಟ್ಯಾನ್ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮನುಷ್ಯನಿಗೆ ಹಾಕಿಕೊಳ್ಳಲು ಬಟ್ಟೆ ಮತ್ತು ಬಿಸಿಲು ಮಳೆಯಿಂದ ರಕ್ಷಿಸಿಕೊಳ್ಳಲು ಸೂರೊಂದು ಅವಶ್ಯಕವಾಗಿ ಬೇಕು. ಮನೆಗಳಿಲ್ಲದೆ ಅಸಹಾಯಕ ಸ್ಥಿತಿಯಲ್ಲಿರುವ ಎಷ್ಟೋ ಕುಟುಂಬಗಳು ನಮ್ಮ ಕಣ್ಣಿಗೆ ಬೀಳುವುದಿಲ್ಲ. ತಮ್ಮ ಗಮನಕ್ಕೆ ಬಂದಿರುವ ಕೆಲವು ಕುಟುಂಬಗಳಿಗೆ ಕಂಬಳ ಸಮಿತಿಯಿಂದ ಮತ್ತು ಇತರ ಮೂಲಗಳಿಂದ ಸಹಕಾರ ನೀಡಲಾಗಿದೆ. ಜನಪ್ರತಿನಿಧಿಗಳು, ಸರಕಾರ ಮಾಡದ ಕೆಲಸವನ್ನು ನೇತಾಜಿ ಬ್ರಿಗೇಡ್ ನಂತಹ ಸಂಘಟನೆ ಮಾಡಿದೆ ಎಂದು ಶ್ಲಾಘಿಸಿದರು. 


ವಕೀಲ ಚೇತನ್ ಕುಮಾರ್ ಶೆಟ್ಟಿ, ಸವೋ೯ದಯ ಫ್ರೆಂಡ್ಸ್ ನ ಅಧ್ಯಕ್ಷ ಗುರು, ಬೆಳುವಾಯಿ ಸ್ಪೂತಿ೯ ವಿಶೇಷ ಮಕ್ಕಳ ಶಾಲೆಯ ಸ್ಥಾಪಕಾಧ್ಯಕ್ಷ ಪ್ರಕಾಶ್ ಜೆ. ಶೆಟ್ಟಿಗಾರ್, ಪುತ್ತಿಗೆ ಪಂಚಾಯತ್ ನ ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಬಜರಂಗದಳದ ಅಭಿಲಾಷ್ ಅಜು೯ನಾಪುರ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದಶ೯ನ್ ಎಂ., ಆರ್.ಎಸ್.ಎಸ್ ಮುಖಂಡ ಮಂಜುನಾಥ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು. ನೇತಾಜಿ ಬ್ರಿಗೇಡ್ ನ  ಅಧ್ಯಕ್ಷ ದಿನೇಶ್ ಶೆಟ್ಟಿ, ಸ್ಥಾಪಕಾಧ್ಯಕ್ಷ ರಾಹುಲ್ ಕುಲಾಲ್, ವಿಜೇಶ್ ಅವರ ತಾಯಿ ಲಕ್ಷ್ಮೀ ಮತ್ತು ಮನೆಯ ಯಜಮಾನಿ ಬೇಬಿ, ನೇತಾಜಿ ಬ್ರಿಗೇಡ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಅಶೋಕ್ ಅವರು ಸ್ವಾಗತಿಸಿ, ಕಾಯ೯ಕ್ರಮ ನಿರೂಪಿಸಿದರು.


ಮೂಡುಬಿದಿರೆ ಕಂಬಳ ಸಹಿತ ವಿವಿಧ ಜಾತ್ರಾ ಮಹೋತ್ಸವಗಳಲ್ಲಿ ವೇಷ ಹಾಕಿ ಅದರಲ್ಲಿ ಒಟ್ಟಾದ ಹಣದಲ್ಲಿ ಅಸಹಾಯಕರಿಗೆ ವೈದ್ಯಕೀಯ ವೆಚ್ಚಕ್ಕೆ ನೆರವು ಮುಂತಾದ ಸೇವಾ ಕಾಯ೯ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ನೇತಾಜಿ ಬ್ರಿಗೇಡ್ ನ ಟ್ರಸ್ಟಿ ವಿಜೇಶ್ ಅವರು ಕಳೆದ ಆರು ತಿಂಗಳ ಹಿಂದೆ  ಹೃದಯಾಘಾತದಿಂದ  ನಿಧನರಾಗಿದ್ದರು. ಸಾವನ್ನಪ್ಪಿರುವ  ವಿಜೇಶ್ ಅಮೀನ್ ಅವರ ಹೆಸರು ಶಾಶ್ವತವಾಗಿರಬೇಕೆಂಬ ನಿಟ್ಟಿನಲ್ಲಿ  ಹಿರಿ ಜೀವಕ್ಕೆ ಸೂರನ್ನು ನಿಮಿ೯ಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article