ಮರಿಯಾಡಿ ಅಂಗನವಾಡಿ ಶಾಲೆಗೆ ರೌಂಡ್ ಟೇಬಲ್ಗಳ ಕೊಡುಗೆ
Wednesday, September 3, 2025
ಮೂಡುಬಿದಿರೆ: ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ವತಿಯಿಂದ ಮರಿಯಾಡಿ ಅಂಗನವಾಡಿ ಶಾಲೆಗೆ ಸೋಮವಾರ ರೌಂಡ್ ಟೇಬಲ್ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಕ್ಲಬ್ ಅಧ್ಯಕ್ಷ ಹರೀಶ್ ಎಂ.ಕೆ., ನಿಕಟಪೂರ್ವ ಅಧ್ಯಕ್ಷ ಪೂರ್ಣ ಚಂದ್ರ, ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಸದಸ್ಯರಾದ ಶಂಕರ್ ಕೋಟ್ಯಾನ್, ಶಂಕರ್ ರಾವ್, ಪತ್ರಕರ್ತ ಪ್ರಸನ್ನ ಹೆಗ್ಡೆ, ಅಂಗನವಾಡಿ ಶಿಕ್ಷಕಿ ಹೇಮಾವತಿ ಆರ್. ಪೂಜಾರಿ, ಅಡುಗೆ ಸಹಾಯಕಿ ವಿನೋದ ಎನ್. ಭಂಡಾರಿ, ಸ್ತ್ರೀ ಶಕ್ತಿ ಸದಸ್ಯರು ಹಾಗೂ ಮಕ್ಕಳ ಹೆತ್ತವರು ಇದ್ದರು.
ದಾನಿ ಸುಜಯ ಎ. ಜೈನ್ ಶಾಲೆಗೆ ಎರಡು ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದರು.