
ಸಂತ ಫಿಲೋಮಿನಾ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
ಕಾಲೇಜಿನ ಪ್ರಾಚಾರ್ಯರಾದ ರೆ. ಡಾ. ಆಂತೋನಿ ಪ್ರಕಾಶ್ ಮಾಂತೇರೋ ಶಿಕ್ಷಕರನ್ನುದ್ದೇಶಿಸಿ ಮಾತನಾಡಿ, ದೇಶದ ಅತ್ಯುತ್ತಮ ಮನಸ್ಸುಗಳು ಶಿಕ್ಷಕರಾಗಿರಬೇಕು ಎಂದು ಹೇಳಿದರು.
ಉಪನ್ಯಾಸಕರಾದ ತೇಜಸ್ವಿ ಭಟ್ ಅವರು ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು.
ಭಾರತೀ ಎಸ್. ರೈ ಅವರು ಶಿಕ್ಷಕರ ಜವಾಬ್ದಾರಿ, ಸಮಾಜ ಮತ್ತು ವಿದ್ಯಾಸಂಸ್ಥೆಗಳ ನಿರೀಕ್ಷೆಗಳು, ಸವಾಲುಗಳನ್ನು ನಿಭಾಯಿಸಲು ಬೇಕಾದ ಆತ್ಮವಿಶ್ವಾಸದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ವಿದ್ಯಾರ್ಥಿಯ ಪ್ರತಿ ಸೋಲು-ಗೆಲುವು ಆತನ ವ್ಯಕ್ತಿತ್ವದ ಬಗೆಗಿನ ಅರಿವಾಗಿರಬೇಕು ಹಾಗೂ ಶಿಕ್ಷಕರು ಬೋಧಿಸುವ ಸ್ಥಿತಿಸ್ಥಾಪಕತ್ವವೇ ವಿದ್ಯಾರ್ಥಿಗಳಿಗೆ ಅತ್ಯಂತ ಒಳ್ಳೆಯ ಜೀವನ ಪಾಠ ಎಂದು ತಿಳಿಸಿದರು.
ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ ಸ್ವಾಗತಿಸಿ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕರಾದ ಹರ್ಷಿತ್ ವಂದಿಸಿದರು. ಶಿವಾನಿ ಮಲ್ಯ ಕಾರ್ಯಕ್ರಮವನ್ನು ನಿರೂಪಿಸಿದರು.
ಉಪನ್ಯಾಸಕರಾದ ಸುರಕ್ಷಾ, ಶ್ರೀರಾಗ, ಶಿವಾನಿ ಮಲ್ಯ, ಪ್ರಶಾಂತ್ ರೈ ವಿವಿಧ ಮನೋರಂಜನಾ ಕಾರ್ಯಕ್ರಮವನ್ನು ನೀಡಿದರು.