ಮಹಿಷಾಸುರ ನಾಡಿನ ಮೂಲನಿವಾಸಿಗಳ ಅಸ್ಮಿತೆ
ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ ನಡೆದ ಮಹಿಷಾಸುರನಿಗೆ ಪುಷ್ಪಾರ್ಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೂ ಪುರಾಣಗಳಲ್ಲಿ ಅವಾಸ್ತವಿಕ, ಅಮಾನವೀಯ ಮತ್ತು ಅವೈಜ್ಞಾನಿಕ ಸಂಗತಿಗಳನ್ನು ಮಂಡಿಸಲಾಗಿದೆ ಎಂದರು.
ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ ಬಲಿ ಚಕ್ರವರ್ತಿ, ರಾವಣ, ನರಕಾಸುರ, ಮಹಿಷಾಸುರ ಮುಂತಾದ ಮಹಾರಾಜರನ್ನು ಹೇಯವಾಗಿ ಚಿತ್ರಿಸುವ ಮೂಲಕ ಬೌದ್ಧ ಧರ್ಮವನ್ನು ನಾಶಮಾಡುವ ಪಿತೂರಿ ನಡೆಸಲಾಗಿದೆ. ಮಹಿಷಾಸುರ ಎಂದರೆ ಪ್ರಾಣ ರಕ್ಷಿಸುವ ಮಹಾರಕ್ಷಕ ಮತ್ತು ಮಹಿಷಮಂಡಲ ಕಟ್ಟಿ ಬೆಳೆಸಿದ ದೊರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಮಹಿಷಾಸುರನ ಸ್ಮರಣೆ ಯಾವುದೇ ಧರ್ಮ ಅಥವಾ ಸರಕಾರದ ವಿರುದ್ಧವಲ್ಲ ಎಂದರು
ಅಂಬೇಡ್ಕರ್ ಯುವಸೇನೆಯ ಮುಖಂಡರಾದ ಹರೀಶ್ ಸಾಲ್ಯಾನ್, ದಯಾಕರ್ ಮಲ್ಪೆ, ಅರುಣ್ ಸಾಲ್ಯಾನ್, ಭಗವಾನ್ ಮಲ್ಪೆ, ಪ್ರಶಾಂತ್ ಬಿ.ಎನ್., ರವಿರಾಜ್ ಲಕ್ಷ್ಮಿನಗರ, ನವೀನ್ ಬನ್ನಂಜೆ, ಶಶಿಕಾಂತ್ ನೇಜಾರು, ಸಾಧು ಚಿಟ್ಪಾಡಿ, ವಿನಯ ಕೊಡಂಕೂರು, ರಾಜೇಶ್ ಮಲ್ಪೆ, ಉಡುಪಿ ನಗರಸಭಾ ಸದಸ್ಯ ಯಾದವ ಕೊಳ, ಸಂಧ್ಯಾ ತಿಲಕ್ರಾಜ್ ಮೊದಲಾದವರಿದ್ದರು.