
ಫೋಟೋಗ್ರಫಿಯಲ್ಲಿ ಅಪಾರ ಅವಕಾಶಗಳಿವೆ
Wednesday, September 17, 2025
ಉಜಿರೆ: ಫೋಟೋಗ್ರಫಿಯಲ್ಲಿ ಇಂದು ಅಪಾರ ಅವಕಾಶಗಳ:ಇದ್ದು, ಭಾವನೆಗಳನ್ನು ಅರ್ಥಮಾಡಿಕೊಂಡು ಸಂದರ್ಭೋಚಿತವಾಗಿ ತಾಳ್ಮೆಯಿಂದ ಫೋಟೊ ತೆಗೆಯಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಸಲಹೆ ನೀಡಿದರು.
ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಫೋಟೊಗ್ರಫಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು.
ಹಾಸನದ ಮಂಗಳಾ, ರೂಪಾ, ಮಂಡ್ಯದ ಮಧುಕರ್ ತರಬೇತಿ ಬಗ್ಯೆ ಅನುಭವ, ಅನಿಸಿಕೆ ವ್ಯಕ್ತಪಡಿಸಿದರು.
ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಉಪನ್ಯಾಸಕ ಕರುಣಾಕರ ಜೈನ್ ವಂದಿಸಿದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರ್ವಹಿಸಿದರು.