ಅಂಬ್ಲಮೊಗರು ಗ್ರಾಮವು ಇಂದು ಕ್ಷಿಪ್ರವಾಗಿ ಸರ್ವತೋಮುಖ ಅಭಿವೃದ್ಧಿಯನ್ನು ಕಂಡಿದೆ: ಸ್ಪೀಕರ್ ಯು.ಟಿ. ಖಾದರ್

ಅಂಬ್ಲಮೊಗರು ಗ್ರಾಮವು ಇಂದು ಕ್ಷಿಪ್ರವಾಗಿ ಸರ್ವತೋಮುಖ ಅಭಿವೃದ್ಧಿಯನ್ನು ಕಂಡಿದೆ: ಸ್ಪೀಕರ್ ಯು.ಟಿ. ಖಾದರ್


ಉಳ್ಳಾಲ: ಗ್ರಾಮಸ್ಥರ ಸಂಪೂರ್ಣ ಸಹಕಾರದಿಂದಾಗಿ ಕುಗ್ರಾಮವಾಗಿದ್ದ ಅಂಬ್ಲಮೊಗರು ಗ್ರಾಮವು ಇಂದು ಕ್ಷಿಪ್ರವಾಗಿ ಸರ್ವತೋಮುಖ ಅಭಿವೃದ್ಧಿಯನ್ನು ಕಂಡಿದೆ. ಜನಪ್ರತಿನಿಧಿಗಳ ಅಧಿಕಾರ ಎಂದಿಗೂ ಶಾಶ್ವತವಲ್ಲ. ಗ್ರಾಮ ಪಂಚಾಯತ್ ಕಟ್ಟಡ ಮಾತ್ರ ಗ್ರಾಮದ ಆಸ್ತಿಯಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಅಂಬ್ಲಮೊಗರು ಗ್ರಾಮ ಪಂಚಾಯತ್ ನಲ್ಲಿ ಶನಿವಾರದಂದು ನಡೆದ ‘ಪಂಚಾಯತ್ ಕಡೆ ಪಂಚ ಗ್ಯಾರಂಟಿ’ ಕಾರ್ಯಕ್ರಮಕ್ಕೆ ಚಾಲನೆ, ನೂತನ ಪಂಚಾಯತ್ ಕಟ್ಟಡಕ್ಕೆ ಶಿಲಾನ್ಯಾಸ ಮತ್ತು ನೂತನ ಕಸ ವಿಲೇವಾರಿ ವಾಹನವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಸುಂದರ ಮತ್ತು ಮಾದರಿಯಾದ ನೂತನ ಪಂಚಾಯತ್ ಕಟ್ಟಡ ನಿರ್ಮಾಣಗೊಂಡು ಒಂದೇ ಸೂರಿನಡಿ ಎಲ್ಲಾ ಆಡಳಿತಾತ್ಮಕ ಸೇವೆಗಳು ಗ್ರಾಮಸ್ಥರಿಗೆ ಲಭಿಸುವಂತಾಗಲಿ ಎಂದರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಡಿ.ಎಸ್.ಗಟ್ಟಿ ಮಾತನಾಡಿದರು.

ಅಂಬ್ಲಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷ ಇಕ್ಬಾಲ್ ಎಸ್.ಎಂ. ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮುಮ್ತಾಝ್, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್,ಉಪಾಧ್ಯಕ್ಷ ದಿನೇಶ್ ರೈ, ಕುಂಡೂರು ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್, ಹರೇಕಳ ಗ್ರಾ.ಪಂ. ಮಾಜಿ ಅಧ್ಯಕ್ಷ ಬದ್ರುದ್ದೀನ್, ಇರಾ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ರಝಾಕ್ ಕುಕ್ಕಾಜೆ, ಉದ್ಯಮಿ ಸಿ.ಎಂ. ಫಾರೂಕ್, ಬೆಳ್ಮ ಗ್ರಾ.ಪಂ ಮಾಜಿ ಅಧ್ಯಕ್ಷ ಸತ್ತಾರ್, ಮಾಜಿ ತಾ.ಪಂ. ಸದಸ್ಯರಾದ ಜಬ್ಬಾರ್ ಬೋಳಿಯಾರ್, ಮಹಮ್ಮದ್ ಮುಸ್ತಾಫ, ಸುದರ್ಶನ್ ಶೆಟ್ಟಿ, ಕೊಣಾಜೆ ಗ್ರಾ.ಪಂ. ಸದಸ್ಯರಾದ ದೇವಣ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ರಫೀಕ್ ಅಂಬ್ಲಮೊಗರು ಪ್ರಸ್ತಾವನೆಗೈದು ಸ್ವಾಗತಿಸಿದರು. ಪಿಡಿಓ ಅಬ್ದುಲ್ ಖಾದರ್ ವಂದಿಸಿ, ರಝಾಕ್ ಕುಕ್ಕಾಜೆ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article