ಅಕ್ರಮ ಮದ್ಯ ಮಾರಾಟ: ಪ್ರಕರಣ ದಾಖಲು
Friday, October 24, 2025
ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ಬೊಂಡಾಲ ಎಂಬಲ್ಲಿ ದಿನಸಿ ಅಂಗಡಿಯೊಂದರಲ್ಲಿ, ಅಕ್ರಮವಾಗಿ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವುದನ್ನು ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ.
ಇಲ್ಲಿನ ಹರ್ಷಿತ್ ಎಂಬವರ ಮಾಲಕತ್ವದ ದಿನಸಿ ಅಂಗಡಿಯಲ್ಲಿ,ಅಕ್ರಮವಾಗಿ ಮದ್ಯದ ಸ್ಯಾಚೆಟ್ ಗಳು ಮಾರಾಟಕ್ಕಾಗಿ ದಾಸ್ತಾನು ಇಟ್ಟಿರುವುದು ಪತ್ತೆಯಾಗಿದೆ.ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.