ಕುಕ್ಕೆ ದೇವಸ್ಥಾನದಲ್ಲಿ ಸಂಭ್ರಮದ ದೀಪಾವಳಿ ಆಚರಣೆ
ಮಂಗಳವಾರ ಶ್ರೀ ದೇವರ ಸನ್ನಿಧಿಯಲ್ಲಿ ದೀಪಾಲೆ ಮರವನ್ನ ಏರಿಸುದವರೊಂದಿಗೆ ಉತ್ಸವಗಳಿಗೆ ಚಾಲನೆ ದೊರೆತಿದೆ. ಬುಧವಾರ ಬಲಿಪಾಡ್ಯಮಿ ದಿನದಂದು ಮಧ್ಯಾಹ್ನ ಮಹಾಪೂಜೆಯ ನಂತರ ದೇವಸ್ಥಾನದ ಆವರಣದಲ್ಲಿ ವೈದಿಕ ವಿಧಿ ವಿಧಾನಗಳೊಂದಿಗೆ ಗಜ ಪೂಜೆ ನಡೆಯಿತು.
ಶ್ರೀ ದೇವಳದ ಕ್ಷೇತ್ರ ಪುರೋಹಿತ ಮಧುಸೂಧನ ಕಲ್ಲುರಾಯರು ವಿಧಿ ವಿಧಾನಗಳನ್ನು ನೆರವೇರಿಸಿದರು . ಸಂಜೆ ಗೋಧೋಳಿ ಲಗ್ನದಲ್ಲಿ ಗೋಪೂಜೆ ನಡೆಯಿತು. ರಾತ್ರಿ ಶ್ರೀ ದೇವರಿಗೆ ಮಹಾಪೂಜೆ ಜರಗಿದ ನಂತರ ಹೊರಅಂಗಣದಲ್ಲಿ ದೀಪಾರಾಧನೆಯುಕ್ತ ಪಲ್ಲಕ್ಕಿ ಉತ್ಸವ ಹಾಗೂ ಬಂಡಿ ಉತ್ಸವ ನಡೆಯಿತು. ಇನ್ನು ಮುಂದೆ ರಾತ್ರಿ ಮಹಾಪೂಜೆ ನಂತರ ಹೋರಾಂಗಣದಲ್ಲಿ ಈ ಉತ್ಸವಗಳು ನೆರವೇರಲಿರುವುದು.
ಈ ಎಲ್ಲಾ ಸಂದರ್ಭಗಳಲ್ಲಿ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ ಹಿಂಜಾಡಿ ಸದಸ್ಯರುಗಳಾದ ಅಶೋಕ ನಿಕ್ರಾಜೆ,ಡಾಟ ರಘು, ಲೀಲಾ ಮನಮೋಹನ್, ಪ್ರವೀಣ ರೈ, ಸೌಮ್ಯ ಭರತ್ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಶಿಷ್ಟಾಚಾರ ವಿಭಾಗದ ಅಧಿಕಾರಿಗಳು, ಪುರೋಹಿತ ವರ್ಗದವರು, ಸಿಬ್ಬಂದಿ ವರ್ಗದವರು ಭಕ್ತಾದಿಗಳು ಹಾಗೂ ಊರವರು ಹಾಜರಿದ್ದರು.