ಸೇತುವೆಯಲ್ಲಿ ರಿಕ್ಷಾ ನಿಲ್ಲಿಸಿ ನಾಪತ್ತೆ
ಬಂಟ್ವಾಳ ತಾಲೂಕು ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ನಿವಾಸಿ ಪ್ರೀತಂ ಲೋಬೋ ನಾಪತ್ತೆಯಾದವರೆಂದು ಹೇಳಲಾಗಿದೆ.
ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ತನ್ನ ಬ್ಯಾಟರಿ ಚಾಲಿತ ರಿಕ್ಷಾವನ್ನು ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದು, ಈ ಬಗ್ಗೆ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದರು.
ಪಾಣೆಮಂಗಳೂರು ಹಳೇ ಸೇತುವೆಯಲ್ಲಿ ಅನಾಥವಾಗಿ ನಿಲುಗಡೆಯಾದ ರಿಕ್ಷಾದ ಪೋಟೋ ಸಾಮಾಜಿಕ ಜಾಲತಾಣದಲ್ಲು ವೈರಲ್ ಆಗಿದೆ.
ಬಹುತೇಕ ಇವರು ರಿಕ್ಷಾ ನಿಲ್ಲಿಸಿ ನದಿಗೆ ಹಾರಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದು, ಬಂಟ್ವಾಳ ನಗರ ಠಾಣಾ ಪೋಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ನೇತ್ರಾವತಿ ನದಿಯಲ್ಲಿ ಸಂಜೆಯವರೆಗೂ ಶೋಧ ಕಾರ್ಯನಡೆಸಿದ್ದು,ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಈ ಹಿಂದೆಯು ಒಂದು ಬಾರಿ ಇವರು ನಾಪತ್ತೆಯಾಗಿದ್ದರೆನ್ನಲಾಗಿದ್ದು,ಎರಡು ದಿನಗಳ ಬಳಿಕ ಅಗಮಿಸಿದ್ದರೆನ್ನಲಾಗಿದೆ.
ಈ ಬಾರಿ ತನ್ನ ರಿಕ್ಷವನ್ನು ಸೇತುವೆ ಮೇಲೆ ನಿಲ್ಲಿಸಿ ನಾಪತ್ತೆಯಾಗಿದ್ದು,ನದಿಗೆ ಹಾರಿದ್ದಾರೋ ಅಥವಾ ಏಲ್ಲಿಯಾದರೂ ತೆರಳಿದ್ದಾರೋ ಎಂಬುದು ಸದ್ಯಕ್ಕೆ ನಿಗೂಢವಾಗಿದೆ.