ಬ್ರಹ್ಮರಕೊಟ್ಲು ಟೋಲ್ ಬಳಿ ಬೈಕ್‌ಗೆ ಕಾರು ಢಿಕ್ಕಿ: ಸವಾರರು ಗಂಭೀರ

ಬ್ರಹ್ಮರಕೊಟ್ಲು ಟೋಲ್ ಬಳಿ ಬೈಕ್‌ಗೆ ಕಾರು ಢಿಕ್ಕಿ: ಸವಾರರು ಗಂಭೀರ


ಬಂಟ್ವಾಳ: ರಾಂಗ್ ಸೈಡ್‌ನಿಂದ ಕಾರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಗಂಭೀರ ಗಾಯಗೊಂಡ ಘಟನೆ ಬಿ.ಸಿ.ರೋಡ್ ಸಮೀಪದ ತಲಪಾಡಿ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ವಿಟ್ಲ ಮೂಲದ ನಿವಾಸಿ, ಮಿಫ್ಸ್ ಸಂಸ್ಥೆಯ ವಿದ್ಯಾರ್ಥಿ ಮಿದ್ಲಾಜ್ ಗಂಭೀರ ಗಾಯಗೊಂಡ ಬೈಕ್ ಸವಾರ ಎಂದು ತಿಳಿದುಬಂದಿದೆ. ಬೈಕ್‌ನಲ್ಲಿದ್ದ ಸಹ ಸವಾರನು ಗಾಯಗೊಂಡಿದ್ದು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.


ಇವರಿಬ್ಬರೂ ಅಡ್ಯಾರ್‌ನಲ್ಲಿ ಕಾರ್ಯಾಚರಿಸುತ್ತಿರುವ ಮಿಫ್ಸ್ ಸಂಸ್ಥೆಯಲ್ಲಿ ಫೈರ್ ಅಂಡ್ ಸೇಫ್ಟಿ ಕೋರ್ಸ್ ಕಲಿಯುತ್ತಿದ್ದರು. ಎಂದಿನಂತೆ ಕೋರ್ಸ್ ಮುಗಿಸಿ ಅಡ್ಯಾರ್‌ನಿಂದ ವಿಟ್ಲದತ್ತ ಬೈಕ್‌ನಲ್ಲಿ ತೆರಳುತ್ತಿದ್ದಾಗ ತಲಪಾಡಿಯಲ್ಲಿ ರಾಂಗ್ ಸೈಡ್‌ನಲ್ಲಿ ಅತೀ ವೇಗದಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಘಟನೆಯಿಂದ ಹೊಸ ಬೈಕ್ ನಜ್ಜುಗುಜ್ಜಾಗಿದೆ.

ಘಟನೆಯಿಂದ ರಾಷ್ಟ್ರಿಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬ್ರಹ್ಮರಕೂಟ್ಲು ಟೋಲ್ ತಪ್ಪಿಸುವ ನಿಟ್ಟಿನಲ್ಲಿ ತಲಪಾಡಿಯ ಸರ್ವಿಸ್ ರಸ್ತೆಗೆ ವಾಹನಗಳು ಏಕಾಏಕಿ ತಿರುವು ಪಡೆದಾಗ ಅವಘಡಗಳು ನಿರಂತರವಾಗಿ ಸಂಭವಿಸುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಅಪಘಾತವು ಇದೇ ಕಾರಣದಿಂದ ನಡೆದಿದೆಯೆನ್ನಲಾಗಿದೆ.

ಬಿ.ಸಿ.ರೋಡಿನಿಂದ ಮಂಗಳೂರಿಗೆ ತೆರಳಬೇಕಾದರೆ ಬ್ರಹ್ಮರಕೊಟ್ಲು ಟೋಲ್ ಬಳಿ ಸರ್ವಿಸ್ ರಸ್ತೆ ಬಲಭಾಗದಲ್ಲಿ ಮಾತ್ರ ಇದ್ದು, ವಾಹನಗಳು ಟೋಲ್ ತಪ್ಪಿಸಲು ಅಥವಾ ಆ ಭಾಗವದಲ್ಲಿರುವ ಮನೆಗಳ ಜನರು ವಾಹನವನ್ನು ಬಲಭಾಗಕ್ಕೆ ತಿರುವು ಪಡೆದುಕೊಳ್ಳುತ್ತಾರೆ. ಈ ಸಂದರ್ಭ ಮಂಗಳೂರಿನಿಂದ ಬಿ.ಸಿ.ರೋಡಿನತ್ತ ಅತೀ ವೇಗದಿಂದ ಬರುವ ವಾಹನಗಳು ಸ್ವಲ್ಪ ಯಾಮಾರಿದರೂ ಅವಘಡ ಸಂಭವಿಸುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article