ಮನೆಯಲ್ಲಿ ಬೆಂಕಿ ಅವಘಡ: ಸಾವಿರಾರು ಮೌಲ್ಯದ ಸೂತ್ತು ಭಸ್ಮ
Friday, October 10, 2025
ಬಂಟ್ವಾಳ: ಇಲ್ಲಿಗೆ ಸಮೀಪದ ನಾವೂರು ಎಂಬಲ್ಲಿ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಾವಿರಾರು ರೂ. ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ನಾವೂರ ಗ್ರಾಮದ ಕನಪಾದೆ ನಿವಾಸಿ ದಿನೇಶ್ ಪೂಜಾರಿ ಅವರ ಮನೆಯಲ್ಲಿ ಶುಕ್ರವಾರ ಬೆಳಗ್ಗಿನ ಜಾವ 3 ಗಂಟೆಯ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಮನೆಯಲ್ಲಿ ಮಗು ಜೋರಾಗಿ ಆಳುತ್ತಿದ್ದಾಗ ಮನೆಮಂದಿ ಎಚ್ಚರಗೊಂಡಾಗ ಬೆಂಕಿ ಮನೆಯನ್ನು ಅವರಿಸುತ್ತಿರುವುದು ಬೆಳಕಿಗೆ ಬಂದಿದೆ.
ಬೆಂಕಿಯ ಕೆನ್ನಾಲಗೆ ಮನೆಯಲ್ಲಿ ದಾಸ್ತಾನು ಇರಿಸಿದ್ದ ಅಕ್ಕಿ ಗೋಣಿ ಚೀಲಗಳು, ಮಕ್ಕಳ ಶಾಲಾ ಸಮವಸ್ತ್ರ, ಶಾಲಾ ಪಠ್ಯ ಪುಸ್ತಕಗಳು ಮತ್ತು ಬಟ್ಟೆ ಬರೆಗಳು ಸುಟ್ಟು ಭಸ್ಮವಾಗಿದೆ.
ಘಟನೆಯಿಂದ ಸಾವಿರಾರು ರೂ. ಮೌಲ್ಯದ ಸೊತ್ತುಗಳು ನಷ್ಟವಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯತ್ನ ಪಿಡಿಒ, ಗ್ರಾ.ಪಂ. ಸದಸ್ಯರು ಮತ್ತಿತರರು ಅಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಹಕಾರದಲ್ಲಿ ಬಂಟ್ವಾಳ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.